ದೇಶ

ಔಷಧಿ ಸಿಗುವವರೆಗೂ ಕೊರೋನಾ ವೈರಸ್ ಕುರಿತು ನಿರ್ಲಕ್ಷ್ಯತನ ಬೇಡ: ಪ್ರಧಾನಿ ಮೋದಿ ಎಚ್ಚರಿಕೆ

Srinivasamurthy VN

ಭೋಪಾಲ್: ಭಾರತದಲ್ಲಿ ದಿನಕಳೆದಂತೆ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವಂತೆಯೇ, ಔಷಧಿ ಸಿಗುವವರೆಗೂ ಕೊರೋನಾ ವೈರಸ್ ಕುರಿತು ನಿರ್ಲಕ್ಷ್ಯತನ ಬೇಡ ಎಂದು ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಮಧ್ಯಪ್ರದೇಶದಲ್ಲಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿಯ ಗೃಹಪ್ರವೇಶ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ಕೊರೋನಾ ವೈರಸ್ ಸೋಂಕಿಗೆ ಪರಿಣಾಮ ಔಷಧಿ ಸಿಗುವವರೆಗೂ ಜನರು ತಮ್ಮ ಎಚ್ಚರಿಕೆಯಲ್ಲಿ ತಾವಿರಬೇಕು. ಕೋವಿಡ್ ಸೋಂಕು ನಿಯಂತ್ರಣಕ್ಕೆ  ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ. ಔಷಧಿ ಸಿಗುವವರೆಗೂ ನಿರ್ಲಕ್ಷ್ಯತನ ಬೇಡ. ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವಿಕೆಯನ್ನು ತಪ್ಪದೇ ಪಾಲಿಸಿ ಎಂದು ಹೇಳಿದ್ದಾರೆ.

ಇನ್ನು ಶುಕ್ರವಾರದ ವೇಳೆಗೆ ಮಧ್ಯ ಪ್ರದೇಶದಲ್ಲಿ ಒಟ್ಟಾರೆ ಕೊರೋನಾ ಸೋಂಕಿತರ ಸಂಖ್ಯೆ 83,619ಸಂಖ್ಯೆಗೆ ಏರಿಕೆಯಾಗಿದ್ದು, ಅಂತೆಯೇ ಈ ವರೆಗೂ 1,691 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.  

SCROLL FOR NEXT