ದೇಶ

ಜಮ್ಮು-ಕಾಶ್ಮೀರದ ಪೂಂಛ್ ನಲ್ಲಿ ಪಾಕಿಸ್ತಾನ ಸೇನೆಯಿಂದ ಶೆಲ್ ದಾಳಿ 

Srinivas Rao BV

ಜಮ್ಮು: ಪಾಕಿಸ್ತಾನದ ಸೇನೆ ಜಮ್ಮು-ಕಾಶ್ಮೀರದ ಪೂಂಛ್ ಸೆಕ್ಟರ್ ನ ಎಲ್ಒಸಿ ಯಾದ್ಯಂತ ವ್ಯಾಪಕ ಶೆಲ್ ದಾಳಿ ನಡೆಸಿದೆ. 

ರಕ್ಷಣಾ ವಕ್ತಾರರು ಈ ಬಗ್ಗೆ ಮಾಹಿತಿ ನೀಡಿದ್ದು, "ಪಾಕಿಸ್ತಾನದ ಕಡೆಯಿಂದ ಅಪ್ರಚೋದಿತ ಗುಂಡಿನ ದಾಳಿ, ಶೆಲ್ ದಾಳಿ ನಡೆದಿದ್ದು, ಕದನ ವಿರಾಮ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ. 

"ಭಾರತೀಯ ಸೇನೆ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದು, ಎರಡೂ ಕಡೆಗಳಿಂದ ಮಾನ್ಕೋಟ್ ಹಾಗು ಗುಲ್ಪುರ್ ಸೆಕ್ಟರ್ ಗಳಲ್ಲಿ ಗಡಿಯಾಚೆಗಿನ ಫೈರಿಂಗ್ ನಡೆದಿದೆ, ಘಟನೆಯಲ್ಲಿ ಅದೃಷ್ಟವಶಾತ್ ಜೀವಹಾನಿ ಸಂಭವಿಸಿಲ್ಲ" ಎಂದು ರಕ್ಷಣಾ ವಕ್ತಾರರು ಹೇಳಿದ್ದಾರೆ.

SCROLL FOR NEXT