ದೇಶ

ಉದ್ಧವ್ ಠಾಕ್ರೆ ವ್ಯಂಗ್ಯಚಿತ್ರ ಶೇರ್ ಮಾಡಿದ್ದಕ್ಕೆ ನೌಕಾ ಪಡೆಯ ನಿವೃತ್ತ ಅಧಿಕಾರಿ ಮೇಲೆ ಹಲ್ಲೆ: ನಾಲ್ವರ ಬಂಧನ

Shilpa D

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕುರಿತಾದ ಕಾರ್ಟೂನ್ ಒಂದನ್ನು ವಾಟ್ಸಾಪ್‌ನಲ್ಲಿ ಫಾರ್ವರ್ಡ್ ಮಾಡಿದ್ದಕ್ಕಾಗಿ ನೌಕಾ ಪಡೆಯ ನಿವೃತ್ತ ಅಧಿಕಾರಿ ಮೇಲೆ ಶಿವಸೇನಾದ ಕಾರ್ಯಕರ್ತರು ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ಮುಂಬೈನಲ್ಲಿ ನಡೆದಿದೆ.

ಪೂರ್ವ ಕೊಂಡಿವಳಿ ಪ್ರದೇಶದಲ್ಲಿ ನಡೆದ ಈ ಘಟನೆ ಸಂಬಂಧ ಶಿವ ಸೇನೆಯ  ನಾಲ್ವರು ಕಾರ್ಯಕರ್ತನನ್ನು ಬಂಧಿಸಲಾಗಿದೆ. ಉದ್ಧವ್ ಠಾಕ್ರೆ ಅವರನ್ನು ಅಣಕಿಸುವಂತಹ ಕಾರ್ಟೂನ್ ಒಂದನ್ನು ಹಂಚಿಕೊಂಡಿದ್ದಕ್ಕಾಗಿ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ನೌಕಾಪಡೆಯ ನಿವೃತ್ತ ಅಧಿಕಾರಿ ಮದನ್ ಶರ್ಮಾ ಸಮ್ತಾ ನಗರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ತಮಗೆ ಬಂದಿದ್ದ ವಾಟ್ಸಾಪ್ ಸಂದೇಶದಲ್ಲಿದ್ದ ಕಾರ್ಟೂನ್ ಒಂದನ್ನು 62 ವರ್ಷದ ಮದನ್ ಶರ್ಮಾ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಹಂಚಿಕೊಂಡಿದ್ದರು,  ತಮ್ಮ ನಿವಾಸದಿಂದ ಹೊರಗೆ ಬರುತ್ತಿದ್ದಂತೆಯೇ ಶಿವಸೇನೆ ಕಾರ್ಯಕರ್ತರು ಅವರನ್ನು ಅಟ್ಟಾಡಿಸಿ ಹೊಡೆದಿದ್ದಾರೆ. ಮದನ್ ಶರ್ಮಾ ಅವರ ಕೊರಳಪಟ್ಟಿ ಹಿಡಿದೆಳೆದು ಮುಖದ ಮೇಲೆ ಬಾರಿಸುವ ದೃಶ್ಯಗಳು ಸಿಸಿಟಿವಿ ವಿಡಿಯೋದಲ್ಲಿ ದಾಖಲಾಗಿದೆ.
 

SCROLL FOR NEXT