ದೇಶ

ಮರುಭೂಮಿ ವಲಯದಲ್ಲಿ ಶಾಲೆ ತೆರೆದು ಜೀವನದ ಪಾಠ ಕಲಿಸುವ ರಾಜಸ್ಥಾನಿ ಟೀಚರ್!

Nagaraja AB

ರಾಜಸ್ಥಾನ: ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ ಬರ್ಮರ್ ನ ಗೀತಾ ಸೋಲಂಕಿ ಕಷ್ಟಪಟ್ಟು ವ್ಯಾಸಂಗ ಮಾಡುವ ಮೂಲಕ ಶಿಕ್ಷಕರಾಗಿ ಹೊರಹೊಮ್ಮಿದ್ದಾರೆ. ಈ ಬಾರಿಯ ಶಿಕ್ಷಕರ ದಿನದಿಂದ ಪ್ರಶಸ್ತಿ ಪಡೆದಿರುವ ಗೀತಾ, ಸ್ಥಾಪಿಸಿರುವ ಶಾಲೆಯಲ್ಲಿ ಅರ್ಧದಷ್ಟು ಬಾಲಕಿಯರೇ ಇದ್ದಾರೆ.

ಕೆಲ ವರ್ಷಗಳವರೆಗೂ ರಾಜಸ್ಥಾನದ ಮರುಭೂಮಿ ವಲಯ ಬಾರ್ಮರ್ ನ ಗೀತಾ ಸೋಲಂಕಿಯ ಗ್ರಾಮದಲ್ಲಿ ಬಾಲಕಿಯರು 8ನೇ ತರಗತಿಗೂ ಮೇಲ್ಪಟ್ಟ ಶಿಕ್ಷಣ ಪಡೆಯುವುದನ್ನು  ನಿರೀಕ್ಷಿಸಲು ಸಾಧ್ಯವಿರಲಿಲ್ಲ.

ಬಾರ್ಮರ್ ನಗರದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಕವಾಸ್ ಗ್ರಾಮದಲ್ಲಿನ  ಗೀತಾಗೂ ಈ ವಿಷಯ ಗೊತಿತ್ತು. ಶಾಲೆಯ ನಂತರ ಆಕೆ ಮದುವೆ ಆಗಿದ್ದರು. ಗೀತಾ ತನ್ನ ಶಿಕ್ಷಕ-ತಂದೆಯನ್ನು ಬಯಸಿದಾಗಲೆಲ್ಲಾ, ಅವರ ಸ್ಥಾನದಲ್ಲಿ ತನನ್ನು ಊಹಿಸಿಕೊಳ್ಳುತ್ತಿದ್ದಳು, ಮತ್ತಷ್ಟು ಅಧ್ಯಯನ ಮಾಡಬೇಕು, ಆದರೆ ಹೇಗೆ? ಅವಳು ಮದುವೆಯಾದಾಗಲೂ ಈ ಪ್ರಶ್ನೆ ಉಳಿಯಿತು.

ಒಂದು ವಾರದ ಹಿಂದೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಶಿಕ್ಷಕರ ದಿನ ಪ್ರಶಸ್ತಿ ಬಂದಾಗ ಇವೆಲ್ಲವೂ ಆಕೆಯ ಮನಸಿನ ಸ್ಮೃತಿ ಪಟಲದಲ್ಲಿ ಹಾಗೆಯೇ ಹಾದು ಹೋಗಿದ್ದಾಗಿ ಹೇಳುತ್ತಾರೆ. ಶಿಕ್ಷಣದಲ್ಲಿ ಅನ್ವೇಷಣೆಗಾಗಿ ಗೀತಾ 'ರಾಷ್ಟ್ರೀಯ ಪ್ರಶಸ್ತಿ' ಪಡೆದುಕೊಂಡಿದ್ದಾರೆ. 

ಮೆಟ್ರಿಕ್ಯುಲೆಷನ್ ವರೆಗೂ ವ್ಯಾಸಂಗ ಮಾಡಿದ್ದ ನನ್ನ ಪತಿ ಹಿಂದಿದ್ದರು ಎಂದು ನೆನಪು ಮಾಡಿಕೊಳ್ಳುವ ಗೀತಾ , ಹಿಂದುಳಿದ ಸಮುದಾಯಕ್ಕೆ ಸೇರಿದ್ದು, ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ ಮನೆಯ ಕೆಲಸದ ಜೊತೆಗೆ ಗುಟ್ಟಾಗಿ ವ್ಯಾಸಂಗ ಕೂಡಾ ಮಾಡಿದ್ದಾರೆ.

ಅಡುಗೆ , ಸ್ವಚ್ಛಗೊಳಿಸುವುದರಿಂದ ಹಿಡಿದು, ಹಸು ಮೇಯಿಸುವವರೆಗೂ ಮಾವ ನಿರೀಕ್ಷಿಸಿದಂತೆ ಎಲ್ಲ ಕೆಲಸಗಳನ್ನು ಮಾಡಿ ಮುಗಿಸಿ  ಕೃಷಿ ಭೂಮಿಗೆ ಹೋಗಿ ಅಧ್ಯಯನ ಮಾಡುತ್ತಿದ್ದಾಗಿ ಗೀತಾ ಹೇಳುತ್ತಾರೆ.

2004ರಲ್ಲಿ ಗೀತಾ 10ನೇ ತರಗತಿ ಪಾಸ್ ಮಾಡಿದ್ದು, ಶಿಕ್ಷ ಕರ್ಮಿ ಯೋಜನೆಯಡಿ ರಾಜ್ಯ ಸರ್ಕಾರದಿಂದ ಉದ್ಯೋಗ ಪಡೆದುಕೊಂಡಿದ್ದಾರೆ. ಆ ಸಂದರ್ಭದಲ್ಲಿ ಆಕೆಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ನಂತರ ಆಕೆ ಹಿರಿಯ ಟೀಚಿಂಗ್ ಸರ್ಟಿಫಿಕೆಟ್ ಡಿಗ್ರಿ ಪಡೆದುಕೊಂಡಿದ್ದು, ಅಲ್ಲಿನ ಪ್ರದೇಶದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಶಾಶ್ವತ ಶಿಕ್ಷಕಿಯಾಗಿ ನೇಮಿಸಲಾಗಿದೆ.

ಆರಂಭದಲ್ಲಿ ಮರದ ಕೆಳಗೆ ಮಕ್ಕಳಿಗೆ ಶಿಕ್ಷಣ ಅಭ್ಯಾಸ ಮಾಡಿಸುತ್ತಿದ್ದರು. ಮೊದಲ ವರ್ಷವೇ ಆಕೆಯ ಬಳಿ 55 ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಬರುತ್ತಿದ್ದರು.ನಂತರ ಧೈರ್ಯ ಮಾಡಿದ ಗೀತಾ ಶಾಲೆಯೊಂದನ್ನು ತೆರೆಯಲು ಸ್ವಲ್ಪ ಭೂಮಿ ನೀಡುವಂತೆ ಮಾವನನ್ನು ಕೇಳಿದ್ದಾರೆ. ಅಂದಿನಿಂದ ಗೀತಾ ಮಾಸಿಕ 1200 ರೂ. ಸಂಬಳ ಪಡೆದು ಮೂರು ತಿಂಗಳ ವೇತನವನ್ನು ಮಾವನಿಗೆ ನೀಡಿದ್ದಾರೆ. ನಂತರ ಶಾಲೆ ನಿರ್ಮಿಸಲು ಸ್ವಲ್ಪ ಭೂಮಿ ನೀಡಲು ಆಕೆಯ ಮಾವ ಒಪ್ಪಿಕೊಂಡಿದ್ದಾರೆ.

2006ರಲ್ಲಿ ಪ್ರವಾಹ ಸಂದರ್ಭದಲ್ಲಿ 15 ವಿದ್ಯಾರ್ಥಿಗಳು ಮೃತಪಟ್ಟಿದ್ದರಿಂದ ಗೀತಾ ತುಂಬಾ ತೊಂದರೆ ಅನುಭವಿಸಬೇಕಾಯಿತು. ಸೇನೆಯ ಕೆಲ ಟೆಂಟ್ ಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಹೇಳಿಕೊಡುತ್ತಿದ್ದಾಗಿ ಗೀತಾ ನೆನಪು ಮಾಡಿಕೊಳ್ಳುತ್ತಾರೆ.ಪ್ರಸ್ತುತ ಆಕೆಯ ಪ್ರಯತ್ನದ ಫಲವಾಗಿ ರಾಜಕೀಯ ಶಿಕ್ಷಕರ್ಮಿ ಪ್ರಾಥಮಿಕ ವಿದ್ಯಾಲಯ ಬೆಳೆದು ನಿಂತಿದ್ದು, 2015ರವರೆಗೂ 80 ವಿದ್ಯಾರ್ಥಿಗಳು ಪ್ರತಿ ವರ್ಷ ದಾಖಲಾಗುತ್ತಿದ್ದರು. ಅದರಲ್ಲಿ ಅರ್ಧದಷ್ಟು ಬಾಲಕಿಯರೇ ಇರುತ್ತಿದ್ದರು.

ಆಕೆಯ ಮಾಸಿಕ ಸಂಬಳ 52 ಸಾವಿರ ರೂ. ಆಗಿದೆ. ಆದರೆ, ಆಕೆಯ ಹೋರಾಟ ಇಂದಿಗೂ ಕೂಡಾ ಮುಂದುವರೆದಿದೆ. 2012ರವರೆಗೂ ಆಕೆಯ ಶಾಲೆಗೆ ರಸ್ತೆ ಬೇಕು ಎಂದು ಬೇಡಿಕೆಯಿಡುತ್ತಿದ್ದರು. ಆದರೆ, ಅದು ಒಂದನ್ನು ಪಡೆಯಲು ಸಾಧ್ಯವಾಗಿಲ್ಲ. ಆದರೆ, ತಾನು ಒಂಟಿಯಲ್ಲ ಎಂಬುದು ಸಮಾಧಾನಕಾರ ಸಂಗತಿಯಾಗಿದೆ.

SCROLL FOR NEXT