ದೇಶ

ಎಲ್ಲಾ ಭಾಷೆಗಳನ್ನು ಸಮಾನಾಗಿ ಕಾಣಬೇಕು: ವೆಂಕಯ್ಯ ನಾಯ್ಡು

Srinivas Rao BV

ನವದೆಹಲಿ: ಎಲ್ಲಾ ಭಾಷೆಗಳನ್ನು ಸಮಾನವಾಗಿ ನೋಡಬೇಕು. ಯಾವುದೇ ಒಂದು ಭಾಷೆಯನ್ನು ಹೇರಿಕೆ ಮಾಡುವುದಾಗಲಿ ಅಥವಾ ವಿರೋಧಿಸುವುದಾಗಲಿ ಮಾಡುವುದು ಸರಿಯಲ್ಲ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ. 

ಹಿಂದಿ ದಿವಸ್ ಅಂಗವಾಗಿ ಆನ್ ಲೈನ್ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿ ಹೊರತುಪಡಿಸಿದರೆ ತಮಿಳು, ತೆಲುಗು, ಕನ್ನಡವನ್ನು ಅತಿ ಹೆಚ್ಚು ಜನ ಮಾತನಾಡುತ್ತಾರೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಎಲ್ಲಾ ಮಾತೃಭಾಷೆಗಳಿಗೆ ಪ್ರಾಮುಖ್ಯತೆ ಸಿಗಲಿದೆ. ಪ್ರಾಥಮಿಕ ಶಿಕ್ಷಣ ಅವರ ಮಾತೃಭಾಷೆಯಲ್ಲಿ ದೊರೆಯಲು ಹೊಸ ನೀತಿಯಿಂದ ಅನುಕೂಲವಾಗಲಿದೆ ಎಂದರು. 

ದೇಶದ ಎಲ್ಲಾ ಭಾಷೆಗಳೂ ಸಾಂಸ್ಕೃತಿಕ ಪರಂಪರೆ, ವೈವಿಧ್ಯತೆ ಮತ್ತು ಶ್ರೀಮಂತ ಇತಿಹಾಸ ಹೊಂದಿದೆೇ. ಈ ಎಲ್ಲಾ ಭಾಷೆಗಳು ಜನರ ಹಿರಿಮೆಗೆ ಪಾತ್ರವಾಗಿದೆ ಎಂದರು. 1918ರಲ್ಲಿ ಮಹಾತ್ಮಗಾಂಧಿಯವರು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಆರಂಭಿಸುವ ಮೂಲಕ ಹಿಂದಿ ಮತ್ತು ಇತರ ಭಾರತೀಯ ಭಾಷೆಗಳನ್ನು ಬೆಸೆಯುವ ಕೆಲಸ ಮಾಡಿದ್ದರು. ಹಿಂದಿಯೇತರ ರಾಜ್ಯಗಳ ವಿದ್ಯಾರ್ಥಿಗಳೂ ಕೂಡಾ ಹಿಂದಿ ಕಲಿಕೆಗೆ ಅವಕಾಶ ಕಲ್ಪಿಸಿದ್ದರು. ಈಗ ಭಾಷೆಗಳ ನಡುವೆ ಸಾಮರಸ್ಯ ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಲಹೆ ಮಾಡಿದರು. 

SCROLL FOR NEXT