ದೇಶ

ಕೋವಿಡ್-19: ಚೇತರಿಕೆಯಲ್ಲಿ ಬ್ರೆಜಿಲ್ ಹಿಂದಿಕ್ಕಿದ ಭಾರತ, ವಿಶ್ವದಲ್ಲಿಯೇ ನಂಬರ್ 1

Nagaraja AB

ನವದೆಹಲಿ: ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯ ಕೋವಿಡ್-19 ರೋಗಿಗಳು ಭಾರತದಲ್ಲಿ ಗುಣಮುಖರಾಗುತ್ತಿದ್ದಾರೆ. ಜಾನ್ಸ್ ಹಾಪ್ ಕಿನ್ಸ್ ಯುನಿವರ್ಸಿಟಿ ಮಾಹಿತಿ ಪ್ರಕಾರ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚಿನ  37, 80,107 ಮಂದಿ ಸೋಂಕಿತರು ಭಾರತದಲ್ಲಿ ಕೋವಿಡ್-19  ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಜಗತ್ತಿನಾದ್ಯಂತ  ಒಟ್ಟಾರೇ ಸೋಂಕಿತರ ಸಂಖ್ಯೆ 2, 90, 06, 033 ಆಗಿದ್ದು, 9,24,105 ಮಂದಿ ಸಾವನ್ನಪ್ಪಿದ್ದಾರೆ. 1,96,25,959 ಮಂದಿ ಕೊರೋನಾವೈರಸ್ ನಿಂದ ಗುಣಮುಖರಾಗಿದ್ದಾರೆ.

ವಿಶ್ವದಾದ್ಯಂತ ಕೋವಿಡ್-19 ಮಾಹಿತಿ ಪ್ರಕಾರ, ಭಾರತದಲ್ಲಿ 37, 80, 107 ಮಂದಿ ಗುಣಮುಖರಾಗಿದ್ದು, ನಂಬರ್ 1 ಸ್ಥಾನದಲ್ಲಿದ್ದಾರೆ. ಬ್ರೆಜಿಲ್ ನಲ್ಲಿ 37, 23, 206 ಮಂದಿ ಚೇತರಿಕೆಯಾಗಿದ್ದು, ಎರಡನೇ ಸ್ಥಾನದಲ್ಲಿದೆ. ನಂತರ ಅಮೆರಿಕದಲ್ಲಿ 24, 51, 406 ಮಂದಿ ಗುಣ ಮುಖರಾಗಿದ್ದು, ಮೂರನೇ ಸ್ಥಾನದಲ್ಲಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ದಿನದಿಂದ ದಿನಕ್ಕೆ ಕೊರೋನಾವೈರಸ್ ನಿಂದ ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಚೇತರಿಕೆ ಪ್ರಮಾಣ ಶೇ. 78ರಷ್ಟಿದೆ.

SCROLL FOR NEXT