ದೇಶ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಅಗಲಿದ ಗಣ್ಯರಿಗೆ ಲೋಕಸಭೆಯಲ್ಲಿ ಗೌರವ ಸಂತಾಪ;ಕಲಾಪ 1 ಗಂಟೆ ಮುಂದೂಡಿಕೆ 

Sumana Upadhyaya

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಭೀತಿ, ಶಿಷ್ಟಾಚಾರ, ನಿಯಮಗಳ ನಡುವೆ ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರ ಬೆಳಗ್ಗೆ  9 ಗಂಟೆಗೆ ಆರಂಭವಾಯಿತು.

ಕಲಾಪ ಆರಂಭವಾಗುತ್ತಿದ್ದಂತೆ ಇತ್ತೀಚೆಗೆ ಅಗಲಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಭಾರತೀಯ ಶಾಸ್ತ್ರೀಯ ಸಂಗೀತ ಲೋಕದ ದಂತಕಥೆ ಪಂಡಿತ್ ಜಸ್ರಾಜ್, ಛತ್ತೀಸ್ ಗಢ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ, ಮಧ್ಯ ಪ್ರದೇಶ ರಾಜ್ಯಪಾಲರಾಗಿದ್ದ ಲಾಲ್ಜಿ ಟಂಡನ್, ಉತ್ತರ ಪ್ರದೇಶ ಸಚಿವರಾಗಿದ್ದ ಕಮಲ್ ರಾಣಿ, ಚೇತನ್ ಚೌಹಾಣ್ ಮತ್ತು ನಿನ್ನೆ ಅಗಲಿದ ಕೇಂದ್ರ ಸರ್ಕಾರದ ಮಾಜಿ ಸಚವ ಡಾ ರಘುವಂಶ್ ಪ್ರಸಾದ್ ಸಿಂಗ್ ಹಾಗೂ ಈ ವರ್ಷ ನಿಧನ ಹೊಂದಿದ ಇತರ ಗಣ್ಯರಿಗೆ ಸದನದಲ್ಲಿ ಸದಸ್ಯರು ಗೌರವ ಸಂತಾಪ ಸೂಚಿಸಿದರು.

ನಂತರ ಕಲಾಪವನ್ನು ಒಂದು ಗಂಟೆಗಳ ಕಾಲ ಮುಂದೂಡಲಾಯಿತು.

ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ಕಲಾಪಕ್ಕೆ ಸದನದೊಳಗೆ ಮುಂದಿನ ಆದೇಶಗಳವರೆಗೆ ಮಾಜಿ ಸಂಸದರು, ಎಂಎಲ್‌ಸಿಗಳು,ಶಾಸಕರು,ಖಾಸಗಿ ಕಾರ್ಯದರ್ಶಿಗಳು,ಖಾಸಗಿ ಸಹಾಯಕರು, ಕುಟುಂಬ ಸದಸ್ಯರು, ಖಾಸಗಿ ಅತಿಥಿಗಳು ಮತ್ತು ಸಂಸದರೊಂದಿಗೆ ಭೇಟಿ ನೀಡುವವರು ಮುಂದಿನ ಆದೇಶದವರೆಗೆ ಸಂಸತ್ ಭವನಕ್ಕೆ ಪ್ರವೇಶಿಸಲು ನಿರ್ಬಂಧಿಸಲಾಗಿದೆ. 

SCROLL FOR NEXT