ದೇಶ

ರಷ್ಯಾದಿಂದ ಭಾರತಕ್ಕೆ 100 ಮಿಲಿಯನ್ ಡೋಸ್ 'ಸ್ಪುಟ್ನಿಕ್' ಕೊರೋನಾ ಲಸಿಕೆ ಪೂರೈಕೆ

Lingaraj Badiger

ಹೈದರಾಬಾದ್/ ಮಾಸ್ಕೋ: ಭಾರತಕ್ಕೆ 100 ಮಿಲಿಯನ್ ಡೋಸ್ ಕೋವಿಡ್-19 ಲಸಿಕೆ ಪುರೈಸಲು ರಷ್ಯಾ ಒಪ್ಪಿಕೊಂಡಿದ್ದು, ಈ ಸಂಬಂಧ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಜೊತೆ ರಷ್ಯಾದ ನೇರ ಹೂಡಿಕೆ ನಿಧಿ(ಆರ್‌ಡಿಐಎಫ್) ಭಾರತದಲ್ಲಿ ಕ್ಲಿನಿಕಲ್ ಪ್ರಯೋಗಗಳು ಮತ್ತು ಸ್ಪುಟ್ನಿಕ್ ವಿ ಲಸಿಕೆ ವಿತರಣೆ ಒಪ್ಪಂದ ಮಾಡಿಕೊಂಡಿದೆ.

ರಷ್ಯಾದ ಸಾವರಿನ್ ಹೆಲ್ತ್ ಫಂಡ್ ಭಾರತದ ರೆಡ್ಡೀಸ್ ಲ್ಯಾಬೊರೇಟರಿಗೆ ಸ್ಪುಟ್ನಿಕ್ ವಿ ಲಸಿಕೆಯ 100 ಮಿಲಿಯನ್ ಡೋಸ್‌ಗಳನ್ನು ನೀಡುವುದಾಗಿ ತಿಳಿಸಿದೆ.

ಭಾರತದಲ್ಲಿ ಸ್ಪುಟ್ನಿಕ್ ವಿ ಪ್ರಾಯೋಗಿಕ ಪರೀಕ್ಷೆಗೆ ಅನುಮತಿ ನೀಡಲಾಗಿದ್ದು, ಶೀಘ್ರದಲ್ಲೇ ಲಸಿಕೆಯ ಕ್ಲಿನಿಕಲ್ ಟ್ರಯಲ್ ನಡೆಯಲಿದೆ.

ರಷ್ಯಾದ ಕೊರೋನಾ ಲಸಿಕೆ ಸ್ಪುಟ್ನಿಕ್ ವಿಯ ಮೂರನೇ ಹಂತದ ಪ್ರಯೋಗ ಡಾ. ರೆಡ್ಡೀಸ್ ಲ್ಯಾಬೊರೇಟರಿಯಲ್ಲಿ ನಡೆಯಲಿದೆ. ಭಾರತದಲ್ಲಿ ಕೊರೋನಾ ಸೋಂಕಿನ ವಿರುದ್ಧ ಈ ಲಸಿಕೆ ಹೋರಾಡಲಿದೆ ಎನ್ನುವ ನಂಬಿಕೆ ಇದೆ ಎಂದು ಡಾ. ರೆಡ್ಡೀಸ್ ಕೋ ಚೇರ್ಮನ್ ಮತ್ತು ವ್ಯವಸ್ಥಾನಕ ನಿರ್ದೇಶ ಜಿವಿ ಪ್ರಸಾದ್ ಅವರು ಹೇಳಿದ್ದಾರೆ.

SCROLL FOR NEXT