ದೇಶ

ಮಹಾರಾಷ್ಟ್ರದಲ್ಲಿ ಜನ ಪಾಪಡ್ ತಿಂದು ಕೋರೊನಾ ವೈರಸ್ ನಿಂದ ಚೇತರಿಸಿಕೊಂಡಿದ್ದಾರೆಯೇ? ಬಿಜೆಪಿ ಕಾಲೆಳೆದ ಸಂಜಯ್ ರಾವತ್

Srinivasamurthy VN

ಮುಂಬೈ: ಮಹಾರಾಷ್ಟ್ರದಲ್ಲಿ ಜನ ಪಾಪಡ್ ತಿಂದು ಕೋರೊನಾ ವೈರಸ್ ನಿಂದ ಚೇತರಿಸಿಕೊಂಡಿದ್ದಾರೆಯೇ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

ಕೊರೋನಾ ನಿರ್ವಹಣೆ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ನೀಡಿದ್ದ ದೇಶದಲ್ಲಿ ದಾಖಲಾಗುತ್ತಿರುವ ಬಹುತೇಕ ಸೋಂಕು ಪ್ರಕರಣಗಳು ಮಹಾರಾಷ್ಟ್ರದಿಂದಲೇ ವರದಿಯಾಗುತ್ತಿದೆ ಎಂಬ ಟೀಕೆಗೆ ಸಂಸತ್ ನಲ್ಲಿ ಉತ್ತರಿಸಿದ ರಾವತ್, ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಕುರಿತು ಕೆಲ  ನಾಯಕರು ಮಾತನಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಚೇತರಿಸಿಕೊಂಡವರ ಸಂಖ್ಯೆಯೂ ಅಧಿಕವಿದೆ ಎಂದು ಬಿಜೆಪಿ ನಾಯಕರ ಕಾಲೆಳೆದರು.

'ವಿಶ್ವ ಆರೋಗ್ಯ ಸಂಸ್ಥೆ(ಡಬ್ಲು ಎಚ್‌ಒ)ಕೊಳೆಗೇರಿ ಧಾರಾವಿಯಲ್ಲಿ ಕೊರೋನವನ್ನು ನಿಯಂತ್ರಿಸಿರುವ ಬೃಹನ್ಮುಂಬಯಿ ಮಹಾನಗರ ಪಾಲಿಕೆಯ(ಬಿಎಂಸಿ) ಪ್ರಯತ್ನವನ್ನು ಶ್ಲಾಘಿಸಿದೆ. ನನ್ನ ತಾಯಿ ಹಾಗೂ ಸಹೋದರನಿಗೂ ಕೋವಿಡ್-19 ಸೋಂಕು ತಗಲಿತ್ತು. ಮಹಾರಾಷ್ಟ್ರದ ಹಲವು ಜನರು ಕೋವಿಡ್‌ನಿಂದ  ಚೇತರಿಸಿಕೊಂಡಿದ್ದಾರೆ. ಇಂದು ಧಾರಾವಿಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮಹಾರಾಷ್ಟ್ರ ಸರ್ಕಾರವನ್ನು ನಿನ್ನೆ ಟೀಕಿಸಿದ್ದ ಕೆಲವು ಸದಸ್ಯರಿಗೆ ಈ ಅಂಶವನ್ನು ತಿಳಿಸಲು ಬಯಸುವೆ. ಇಷ್ಟೊಂದು ಜನರು ಹೇಗೆ ಚೇತರಿಸಿಕೊಂಡರು ಎಂದು ಕೇಳಲು ಬಯಸುವೆ? ಭಾಭಿಜಿ ಮಾಡಿರುವ ಪಾಪಡ್ ತಿಂದು ಇವರೆಲ್ಲರೂ  ಚೇತರಿಸಿಕೊಂಡಿದ್ದಾರೆಯೇ? ಇದೊಂದು ರಾಜಕೀಯ ಹೋರಾಟವಲ್ಲ. ಜನರ ಜೀವ ಉಳಿಸಲು ಎಲ್ಲರೂ ಹೋರಾಡಬೇಕಾಗಿದೆ ಎಂದು ರಾವತ್ ಹೇಳಿದರು.

ಇದೇ ವೇಳೆ ಪಾಪಡ್ ಪದವನ್ನು ಬಳಸುವ ಮೂಲಕ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘಾವಲ್ ಹೇಳಿಕೆಯನ್ನು ರಾವತ್ ನೆನಪಿಸಿದರು. ಪಾಪಡ್(ಹಪ್ಪಳ) ಸೇವನೆಯಿಂದ ದೇಹದಲ್ಲಿ ರೋಗ ನಿರೋಧ ಶಕ್ತಿ ಹೆಚ್ಚುತ್ತದೆ ಎಂದು ಮೇಘಾವಲ್ ಹೇಳಿಕೆ ನೀಡಿದ್ದರು. ಸ್ವಲ್ಪ ಸಮಯದ ಬಳಿಕ ಅವರಿಗೇ ಕೊರೋನ  ಸೋಂಕು ತಗಲಿತ್ತು.

SCROLL FOR NEXT