ದೇಶ

ಕೋವಿಡ್-19: ದೇಶದ ಒಟ್ಟಾರೆ ಸೋಂಕಿತರ ಪೈಕಿ 5 ರಾಜ್ಯಗಳಲ್ಲೇ ಶೇ.60 ಸೋಂಕಿತರು!

Srinivasamurthy VN

ನವದೆಹಲಿ: ದೇಶದಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು,  ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ದಾಖಲೆ ಪ್ರಮಾಣದ 96,424 ಸೋಂಕು ಪ್ರಕರಣಗಳು ದಾಖಲಾಗಿದ್ದು ಆ ಮೂಲಕ ದೇಶದಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 52,14,678ಕ್ಕೆ ಏರಿಕೆಯಾಗಿದೆ.

ನಿನ್ನೆ ಒಂದೇ ದಿನ ಬರೋಬ್ಬರಿ 1,174 ಮಂದಿ ಸಾವನ್ನಪ್ಪಿದ್ದು, ಮಹಾಮಾರಿ ವೈರಸ್ ಈವರೆಗೂ 84,372 ಮಂದಿಯನ್ನು ಬಲಿಪಡೆದುಕೊಂಡಿದೆ. ಈ ನಡುವೆ 52,14,678 ಮಂದಿ ಸೋಂಕಿತರ ಪೈಕಿ ಈವರೆಗೂ 41,12,552 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಭಾರತದಲ್ಲಿನ್ನೂ 10,17,754 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಇನ್ನು ದೇಶದಲ್ಲಿನ ಒಟ್ಟಾರೆ ಸೋಂಕಿತರ ಪೈಕಿ ಶೇ.60ರಷ್ಟು ಸೋಂಕಿತರು ಐದು ರಾಜ್ಯಗಳಲ್ಲಿದ್ದು, ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ 11, 45, 840 ಸೋಂಕಿತರಿದ್ದು, ಈ ಪೈಕಿ 8,12,354 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. 2ನೇ ಸ್ಥಾನದಲ್ಲಿರುವ ಆಂಧ್ರ ಪ್ರದೇಶದಲ್ಲಿ 6,01,462 ಸೋಂಕಿತರಿದ್ದು, 5, 08, 080 ಮಂದಿ ಗುಣಮುಖರಾಗಿದ್ದಾರೆ. 3ನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 5, 25, 420 ಸೋಂಕಿತರಿದ್ದು, 4, 70, 192 ಮಂದಿ ಗುಣಮುಖರಾಗಿದ್ದಾರೆ. 4ನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 4, 94, 356 ಸೋಂಕಿತರಿದ್ದು, 3,83,077 ಮಂದಿ ಗುಣಮುಖರಾಗಿದ್ದಾರೆ. 5ನೇ ಸ್ಥಾನದಲ್ಲಿರುವ ಉತ್ತರ ಪ್ರದೇಶದಲ್ಲಿ 3, 36, 294ಸೋಂಕಿತರಿದ್ದು, 2, 63, 288 ಮಂದಿ ಗುಣಮುಖರಾಗಿದ್ದಾರೆ.

SCROLL FOR NEXT