ದೇಶ

ಲಾಕ್ ಡೌನ್ ಎಫೆಕ್ಟ್: ಕಳೆದ ನಾಲ್ಕು ತಿಂಗಳಲ್ಲಿ 60 ಲಕ್ಷ ವೈಟ್ ಕಾಲರ್ ಉದ್ಯೋಗ ನಷ್ಟ

Lingaraj Badiger

ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶದಲ್ಲಿ ಜಾರಿಗೊಳಿಸಲಾಗಿದ್ದ ಲಾಕ್ ಡೌನ್ ಪರಿಣಾಮ ಕೇವಲ ನಾಲ್ಕು ತಿಂಗಳಲ್ಲಿ ದೇಶದಲ್ಲಿ 6.6 ಮಿಲಿಯನ್ ವೈಟ್ ಕಾಲರ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ಭಾರತೀಯ ಆರ್ಥಿಕತೆ ಮೇಲ್ವಿಚಾರಣೆ ಕೇಂದ್ರ (ಸಿಎಂ ಐಇ) ತನ್ನ ವರದಿಯಲ್ಲಿ ತಿಳಿಸಿದೆ.

ವೈಟ್ ಕಾಲರ್ ಉದ್ಯೋಗಿಗಳ ಪೈಕಿ ಇಂಜಿನಿಯರ್ ಗಳು, ವೈದ್ಯರು ಮತ್ತು ಶಿಕ್ಷಕರು ಸೇರಿದಂತೆ ಹಲವು ಕ್ಷೇತ್ರಗಳ ಉದ್ಯೋಗಿಗಳು ನಿರುದ್ಯೋಗಿಗಳಾಗಿದ್ದಾರೆ.

ನಾಲ್ಕು ವರ್ಷಗಳಿಂದ ಸೃಷ್ಟಿಯಾಗಿದ್ದ ಉದ್ಯೋಗಗಳೂ ಸಹ ಕೊರೋನಾ ನಿಯಂತ್ರಿಸಲು ಮಾಡಲಾದ ಲಾಕ್ ಡೌನ್ ಸಮಯದಲ್ಲಿ ತೊಳೆದುಹೋಗಿವೆ ಎಂದೂ ಸಿಎಮ್ಐಇ ವಿಶ್ಲೇಷಿಸಿದೆ.

2016ರ ನಂತರ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಹೆಚ್ಚು ನುರಿತ, ಕೆಲಸ ಮಾಡುವ, ಹೆಚ್ಚಿನ ಸಂಬಳವನ್ನು ಗಳಿಸುವ ಉದ್ಯೋಗಿಗಳನ್ನು ವೈಟ್ ಕಾಲರ್ ಉದ್ಯೋಗಿಗಳು ಎಂದು ಗುರುತಿಸಲಾಗುತ್ತದೆ.

SCROLL FOR NEXT