ದೇಶ

ಶೋಪಿಯಾನ್ ಎನ್ ಕೌಂಟರ್: ಸಾಕ್ಷ್ಯ ಪತ್ತೆ, ಸೇನಾ ಕಾಯ್ದೆಯಡಿ ವಿಚಾರಣೆ ಆರಂಭ

Nagaraja AB

ಶ್ರೀನಗರ: ಈ ವರ್ಷದ ಜುಲೈನಲ್ಲಿ ನಡೆದ ಶೋಪಿಯಾನ್ ಎನ್ ಕೌಂಟರ್ ನಲ್ಲಿ ಮೂವರು ವ್ಯಕ್ತಿಗಳನ್ನು ಹತ್ಯೆ ಮಾಡಲಾಗಿದ್ದು, ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯಡಿ ಅಧಿಕಾರವನ್ನು ಮೀರಿರುವುದು 'ಫ್ರೈಮಾ ಫೇಸಿ' ಸಾಕ್ಷ್ಯದಲ್ಲಿ ಕಂಡುಬಂದಿದ್ದು, ಶಿಸ್ತು ಕ್ರಮಗಳನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.

ಜುಲೈ 18 ರಂದು ಶೋಪಿಯಾನ್ ಜಿಲ್ಲೆಯ ಅಂಶಿಪುರ ಹಳ್ಳಿಯ ಬಳಿ ಮೂವರು ಉಗ್ರರನ್ನು ಹತ್ಯೆ ಮಾಡಿರುವುದಾಗಿ ಸೇನೆ ಹೇಳಿಕೊಂಡಿತ್ತು.

ರಜೌರಿ ಜಿಲ್ಲೆಯ ಅಂಶಿಪುರದಲ್ಲಿನ ಮೂವರು ನಾಪತ್ತೆಯಾಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾದ ನಂತರ 
ಉಗ್ರ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ನೈತಿಕ ನಡವಳಿಕೆಗೆ ಬದ್ಧರಾಗಿರುವ ಸೇನೆಯು ತನಿಖೆಯನ್ನು ಪ್ರಾರಂಭಿಸಿತು ಎಂದು ರಕ್ಷಣಾ ವಕ್ತಾರ ಕೋಲ್ ರಾಜೇಶ್ ಕಾಲಿಯಾ ಶ್ರೀನಗರದಲ್ಲಿ ತಿಳಿಸಿದ್ದಾರೆ.

ತನಿಖೆ ನಾಲ್ಕು ವಾರಗಳಲ್ಲಿ ಪೂರ್ಣಗೊಳ್ಳಲಿದೆ. ಎನ್ ಕೌಂಟರ್ ನಲ್ಲಿ ಹತ್ಯೆಯಾದ ಮೂವರು ಶೋಪಿಯಾನ್ ನಲ್ಲಿ ಕಾರ್ಮಿಕರಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿದೆ.

 ಸೈನ್ಯವು ಪಾರದರ್ಶಕತೆಯ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು, ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿದಾಗ ಶಿಕ್ಷಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

SCROLL FOR NEXT