ದೇಶ

ಭಾರತ ಸಲ್ಪರ್ ಡೈಆಕ್ಸೈಡ್ ಹೊರಸೂಸುವ ವಿಶ್ವದ ಅತಿದೊಡ್ಡ ರಾಷ್ಟ್ರ: ಅಧ್ಯಯನ ವರದಿಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ

Nagaraja AB

ನವದೆಹಲಿ: ಭಾರತವು ಮಾನವ ಜನ್ಯ ಸಲ್ಫರ್ ಡೈಆಕ್ಸೈಡ್ ಹೊರಸೂಸುವ ವಿಶ್ವದ ಅತಿದೊಡ್ಡ ರಾಷ್ಟ್ರ ಎಂಬ ಗ್ರೀನ್ ಪೀಸ್ ಅಧ್ಯಯನವನ್ನು ಕೇಂದ್ರ ಪರಿಸರ ಸಚಿವಾಲಯ ಶನಿವಾರ ತಿರಸ್ಕರಿಸಿದೆ. ತ್ಯಾಜ್ಯ ಅನಿಲದಿಂದ ಗಂಧಕವನ್ನು ಹೊಂದಿರುವ ಮಾಲಿನ್ಯಕಾರಕಗಳನ್ನು ತೆಗೆದುಹಾಕಲು ದೇಶದಲ್ಲಿ 18 ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದೆ.

ವಾಯುಮಾಲಿನ್ಯಕ್ಕೆ ಕಾರಣವಾಗುವ ಕಲ್ಲಿದ್ದಲು ಸುಡುವಿಕೆಯಿಂದ ಭಾರತವು  ಮಾನವಜನ್ಯ ಸಲ್ಫರ್ ಡೈಆಕ್ಸೈಡ್ ಅನ್ನು ಹೊರಸೂಸುವ ವಿಶ್ವದ ಅತಿದೊಡ್ಡ ರಾಷ್ಟ್ರವಾಗಿದೆ ಎಂಬುದು ಸರ್ಕಾರಕ್ಕೆ ತಿಳಿದಿದ್ದೇಯೆ ಎಂಬುದರ ಬಗ್ಗೆ ಕಾಂಗ್ರೆಸ್ ಸಂಸದ ರಿಪುನ್ ಬೋರಾ ಮಾಹಿತಿ ಬಯಸಿದ್ದರು.

ಈ ಸಂಬಂಧ ಪ್ರತಿಕ್ರಿಯಿಸಿದ ಕೇಂದ್ರ ಪರಿಸರ ರಾಜ್ಯ ಖಾತೆ ಸಚಿವ  ಬಾಬುಲ್ ಸುಪ್ರಿಯೋ,  ಭಾರತವು  ಮಾನವಜನ್ಯ ಸಲ್ಫರ್ ಡೈಆಕ್ಸೈಡ್ ಅನ್ನು ಹೊರಸೂಸುವ ವಿಶ್ವದ ಅತಿದೊಡ್ಡ ರಾಷ್ಟ್ರ ಎಂಬ ಗ್ರೀನ್ ಪೀಸ್ ಎನ್ ಜಿ ಒ ಅಧ್ಯಯನದ ವರದಿ ಸರಿಇಲ್ಲ, ಸರ್ಕಾರದ ಅಂಶಗಳು ಇದನ್ನು ಒಪ್ಪುವುದಿಲ್ಲ ಎಂದರು.

ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳಿಂದ  ಗಂಧಕವನ್ನು ಹೊಂದಿರುವ ಮಾಲಿನ್ಯಕಾರಕಗಳನ್ನು ತೆಗೆದುಹಾಕಲು 
16 ಘಟಕಗಳನ್ನು ಆಗಸ್ಟ್ 31 ರಂದು ಸ್ಥಾಪಿಸಲಾಗಿದೆ ಎಂದು  ಸುಪ್ರಿಯೋ ತಿಳಿಸಿದರು.

ಕಲ್ಲಿದ್ದಲು ಸುಡುವುದರಿಂದ ಮಾನವ ಜನ್ಯ ಸಲ್ಪರ್ ಡೈ ಆಕ್ಸೈಡ್ ಹೊರಸೂಸುವ ವಿಶ್ವದ ಅತಿದೊಡ್ಡ ರಾಷ್ಟ್ರ ಎಂದು ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಎನ್ ಜಿ ಒ ಗ್ರೀನ್ ಪೀಸ್ ಇಂಡಿಯಾದ ಅಧ್ಯಯನದಲ್ಲಿ ಹೇಳಲಾಗಿತ್ತು. ಮಧ್ಯಪ್ರದೇಶದ ಸಿಂಗ್ರೌಲಿ, 
ನಯೆವೆಲಿ, ತಮಿಳುನಾಡಿನ ಚೆನ್ನೈ, ಒಡಿಶಾದ ತಲ್ಚರ್ ಮತ್ತು ಜಾರ್ಸುಗುಡಾ, ಛತ್ತೀಸ್ ಗಢದ ಕೊರ್ಬಾ, ಗುಜರಾತಿನ ಕಚ್, ತೆಲಂಗಾಣದ ರಾಮಗುಂಡಂ, ಮಹಾರಾಷ್ಟ್ರದ ಚಂದ್ರಪುರ ಮತ್ತು ಕೊರಾಡಿ ಸಲ್ಪಡ್ ಡೈಆಕ್ಸೈಡ್ ಉತ್ಪಾದಿಸುವ ದೇಶದ ಹಾಟ್ ಸ್ಪಾಟ್ ಗಳೆಂದು ವರದಿಯಲ್ಲಿ ತಿಳಿಸಲಾಗಿತ್ತು.

SCROLL FOR NEXT