ದೇಶ

ಸಚಿವ ಸ್ಥಾನಕ್ಕೆ ರಾಜಿನಾಮೆ ನಂತರ ರಾಗ ಬದಲಿಸಿದ ಹರ್ಸಿಮ್ರತ್ ಕೌರ್ ಬಾದಲ್!

Vishwanath S

ನವದೆಹಲಿ: ಕೃಷಿ ಸುಧಾರಣಾ  ತಿದ್ದುಪಡಿ ಮಸೂದೆಗಳು ರೈತ ವಿರೋಧಿ ಎಂದು ಆರೋಪಿಸಿ ಕೇಂದ್ರ ಸಂಪುಟಕ್ಕೆ  ರಾಜೀನಾಮೆ ನೀಡಿದ್ದ ಶಿರೋಮಣಿ ಅಕಾಲಿ ದಳದ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಈಗ ಉಲ್ಟಾ ಹೊಡೆದಿದ್ದು, ತಾವು ಮಸೂದೆಗಳು  ರೈತ ವಿರೋಧಿ ಎಂದು ಹೇಳಿಯೇ ಇಲ್ಲ ಎಂದಿದ್ದಾರೆ. 

ಈ ಕುರಿತಂತೆ ಸಂದರ್ಶನವೊಂದರಲ್ಲಿ ಮಾತನಾಡಿದ ಬಾದಲ್ 'ಇವು ರೈತ ವಿರೋಧಿ ಮಸೂದೆ ಎಂದು ನಾನು ಹೇಳುತ್ತಿಲ್ಲ. ಆದರೆ ರೈತರು ಇದನ್ನು ಹೇಳುತ್ತಿದ್ದಾರೆ. ಹೀಗಾಗಿ ಇದರ ಬಗ್ಗೆ ಸಮಗ್ರ ಚರ್ಚೆಯಾಗಬೇಕು, ಅವರಸ ಬೇಡ ಎಂಬುದಷ್ಟೆ ತಮ್ಮ ನಿಲುವು ಅಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮೂರು ಮಸೂದೆಗಳು ರೈತ ವಿರೋಧಿ ಎಂದು ವೈಯಕ್ತಿಕವಾಗಿ ಅನಿಸುತ್ತಿದೆಯೇ ಎಂಬ ಪ್ರಶ್ನೆಗೆ, ಅದು ಪ್ರಮುಖ ವಿಷಯವೇ ಅಲ್ಲ. ಮಸೂದೆಗಳು ರೈತರ ಪ್ರಯೋಜನಕ್ಕಾಗಿ ಸಂಸತ್ತಿನಲ್ಲಿ ಮಂಡನೆಯಾಗಿವೆ ಎಂದು ಹೊಸ ರಾಗ ಹಾಡಿದ್ದಾರೆ.

ಇನ್ನು ಹರ್ಸಿಮ್ರತ್ ಕೌರ್ ಅವರ ರಾಜಿನಾಮೆಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಾಜಿನಾಮೆ ಅಂಗೀಕರಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಲಹೆ ಮೇರೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಕ್ಷಣದಿಂದಲೇ ಜಾರಿಗೆ ಬರುವಂತೆ ಬಾದಲ್ ಅವರ ರಾಜಿನಾಮೆ ಅಂಗೀಕರಿಸಿದ್ದಾರೆ. ಜೊತೆಗೆ ಪ್ರಧಾನಿ ಅವರ ಸಲಹೆ ಮೇರೆಗೆ ತೋಮಾರ್ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.

SCROLL FOR NEXT