ದೇಶ

ದಿವಾಳಿ ಸಂಹಿತೆ(2ನೇ ತಿದ್ದುಪಡಿ) ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ

Vishwanath S

ನವದೆಹಲಿ: ದಿವಾಳಿ ಸಂಹಿತೆಯಡಿ ಕಾರ್ಪೊರೇಟ್ ದಿವಾಳಿ ಪರಿಹಾರ ಪ್ರಕ್ರಿಯೆ(ಸಿಐಆರ್‌ಪಿ) ಆರಂಭವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಮಸೂದೆಯನ್ನು ರಾಜ್ಯಸಭೆ ಶನಿವಾರ ಅಂಗೀಕರಿಸಿದೆ.

ದಿವಾಳಿ ಸಂಹಿತೆ(ಎರಡನೇ ತಿದ್ದುಪಡಿ) ಮಸೂದೆ, 2020 ನ್ನು ಮೇಲ್ಮನೆಯಲ್ಲಿ ಪರಿಗಣನೆಗೆ ಮಂಡಿಸಲಾಯಿತು. ನಂತರ  ಮೂಸದೆಯನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು.

ಕಳೆದ ಜೂನ್ 5ರಂದು ರಾಷ್ಟ್ರಪತಿಗಳು ಹೊರಡಿಸಿದ ದಿವಾಳಿ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆ 2020ನ್ನು ಅಸಮ್ಮತಿಸಿ ಕೆ ಕೆ ರಾಜೇಶ್ ಮಂಡಿಸಿದ ಶಾಸನಬದ್ಧ ನಿರ್ಣಯವನ್ನು ಸದನ ನಿರಾಕರಿಸಿದ ನಂತರ ಮಸೂದೆ ಅಂಗೀಕಾರವಾಯಿತು.

ದಿವಾಳಿ ಪರಿಹಾರ ಪ್ರಕ್ರಿಯೆಯಲ್ಲಿ ಎದುರಾಗುವ ಕೆಲವು ತೊಂದರೆಗಳನ್ನು ಕೈಬಿಡುವ ಗುರಿಯನ್ನು ಹೊಂದಿವೆ ಮತ್ತು ಸುಲಲಿತ ವ್ಯವಹಾರವನ್ನು ಇನ್ನಷ್ಟು ಸುಲಭಗೊಳಿಸಲು ಇದು ನೆರವಾಗಲಿದೆ.

ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚರ್ಚೆ ವೇಳೆ, ಉತ್ತಮ ಕಾಳಜಿಯಲ್ಲಿ ಇರಿಸುವುದು, ದಿವಾಳಿಯಾಗದಂತೆ ಇರಿಸುವುದು ಐಬಿಸಿಯ ಉದ್ದೇಶ. ಮಾರ್ಚ್ 25ರಿಂದ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾದ ಕಾರಣ ಅಂದಿನಿಂದ ಸಾಲ ಮರುಪಾವತಿ ಮಾಡಿಲ್ಲದ ಕಂಪನಿಗಳ ವಿರುದ್ಧ ಅಂದಿನಿಂದ ಅನ್ವಯವಾಗುವಂತೆ ಕನಿಷ್ಠ ಆರು ತಿಂಗಳ ಮಟ್ಟಿಗೆ ದಿವಾಳಿ ಕ್ರಮ ತೆಗೆದುಕೊಳ್ಳದಿರುವುದಕ್ಕೆ ಈ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದ್ದರು.

SCROLL FOR NEXT