ದೇಶ

ಕೊರೋನಾ ಲಸಿಕೆ ಅಭಿವೃದ್ಧಿಗೆ ಸರ್ಕಾರ ಉತ್ತೇಜನ, ಅಂತಿಮ ಹಂತದಲ್ಲಿ ಮೂರು ಪ್ರಯೋಗಗಳು- ಡಾ. ಹರ್ಷವರ್ಧನ್

Nagaraja AB

ನವದೆಹಲಿ: ಕೊರೋನಾಗೆ ಲಸಿಕೆ ಒದಗಿಸಲು ಶ್ರಮಿಸುತ್ತಿರುವ 30 ಕಂಪೆನಿಗಳ ಪೈಕಿ 3 ಕಂಪೆನಿಗಳು ಅಂತಿಮ ಹಂತದಲ್ಲಿವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಭಾನುವಾರ ಲೋಕಸಭೆಗೆ ತಿಳಿಸಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕ ರೋಗ ಕುರಿತು ಸದನದಲ್ಲಿ ನಡೆದ ಸುಮಾರು ಮೂರು ತಾಸಿನ ಚರ್ಚೆಗೆ ಉತ್ತರಿಸಿದ ಸಚಿವರು, ವಿಶ್ವದಾದ್ಯಂತ 145 ಲಸಿಕೆ ಅಭಿವೃದ್ಧಿ ಕಂಪೆನಿಗಳಿವೆ. ಇವನ್ನು ವೈದ್ಯಕೀಯವಾಗಿ ಪರಿಶೀಲಿಸಲಾಗುತ್ತಿದೆ.ದೇಶದಲ್ಲಿ ಕಂಡುಹಿಡಿಯಲಾದ ಔಷಧಗಳ ಲಭ್ಯತೆ ಮತ್ತು ಪೂರೈಕೆಯ ಕಾರ್ಯವಿಧಾನದ ಬಗ್ಗೆ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. 

ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಆರೋಗ್ಯ ಸಚಿವಾಲಯಕ್ಕೆ ಪ್ರಧಾನಿ-ಕೇರ್ಸ್ ನಿಧಿಯ ಕುರಿತ ಪ್ರತಿಪಕ್ಷಗಳ ಟೀಕೆಗಳಿಗೆ ಉತ್ತರಿಸಿದ ಸಚಿವರು, ತಮ್ಮ ಸಚಿವಾಲಯಕ್ಕೆ ಮೇಕ್‍ ಇನ್‍ ಇಂಡಿಯಾ ಕಾರ್ಯಕ್ರಮದಡಿ 50,000 ವೆಂಟಿಲೇಟರ್ ಗಳ ತಯಾರಿಕೆಗೆ ನಿಧಿಯಿಂದ 893.93 ಕೋಟಿ ರೂ ದೊರೆತಿದೆ ಎಂದು ಹೇಳಿದರು. 

ಇದೇ ವೇಳೆ ಕೋವಿಡ್ -19ನಿಂದ ದೇಶದ ಜನರನ್ನು ಕಾಪಾಡಲು ಸಕಾರಾತ್ಮಕ ಮತ್ತು ರಚನಾತ್ಮಕ ಚರ್ಚೆಯ ಮೂಲಕ ಅರ್ಥಪೂರ್ಣ ಪರಿಹಾರವನ್ನು ಕಂಡುಕೊಳ್ಳುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಭಾನುವಾರ ಸದಸ್ಯರಿಗೆ ಮನವಿ ಮಾಡಿದ್ದಾರೆ.

SCROLL FOR NEXT