ದೇಶ

ಕೃಷಿ ಮಸೂದೆ ರೈತರ ಮರಣ ಶಾಸನ: ಅದಕ್ಕೆ ಸಹಿ ಹಾಕುವುದಿಲ್ಲ- ಕಾಂಗ್ರೆಸ್ 

Srinivas Rao BV

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಸಂಬಂಧಿತ 2 ಪ್ರಮುಖ ಮಸೂದೆಗಳು ರೈತರ ಮರಣ ಶಾಸನವಾಗಿದೆ. ಅದಕ್ಕೆ ಸಹಿ ಹಾಕುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

ರಾಜ್ಯಸಭೆಯಲ್ಲಿ ರೈತರು ಮತ್ತು ಬೆಳೆಗಳ ವ್ಯಾಪಾರ, ವಾಣಿಜ್ಯ  ಮಸೂದೆ 2020  (ಪ್ರಚಾರ ಮತ್ತು ಸೌಲಭ್ಯ) ಮತ್ತು ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020 ಮಸೂದೆಯ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿರುವ ಕಾಂಗ್ರೆಸ್ ನ ನಾಯಕ ಪ್ರತಾಪ್ ಸಿಂಗ್ ಬಾಜ್ವಾ,  ಎರಡೂ ಮಸೂದೆಗಳನ್ನು ಅಂಗೀಕಾರಕ್ಕೂ ಮುನ್ನ ಆಯ್ಕೆ ಸಮಿತಿಗೆ ಕಳಿಸಬೇಕೆಂದು ಆಗ್ರಹಿಸಿದ್ದಾರೆ. 

ಈ ಮಸೂದೆಗಳನ್ನು ಕೆಟ್ಟ ಕಲ್ಪನೆ ಮತ್ತು ಕೆಟ್ಟ ಸಮಯದ್ದು, ಇದನ್ನು ಕಾಂಗ್ರೆಸ್ ಸಂಪೂರ್ಣವಾಗಿ ವಿರೋಧಿಸುತ್ತದೆ ಎಂದು ಬಾಜ್ವಾ ಹೇಳಿದ್ದಾರೆ. 

ಕೃಷಿ ರಾಜ್ಯಕ್ಕೆ ಸಂಬಂಧಪಟ್ಟ ವಿಷಯವಾಗಿದೆ ಈ ದೃಷ್ಟಿಯಿಂದಲೂ ಈ ಎರಡೂ ಮಸೂದೆಗಳು ಒಕ್ಕೂಟದ ವಿರೋಧಿ ಮಸೂದೆಗಳಾಗಿವೆ.  ದೇಶಾದ್ಯಂತ ಪ್ರಮುಖವಾಗಿ ಪಂಜಾಬ್, ಹರ್ಯಾಣ, ಪಶ್ಚಿಮ ಉತ್ತರ ಪ್ರದೇಶದಲ್ಲಿರುವ  ಕೃಷಿ ಭೂಮಿ ಒಡೆಯರ ವಿರೋಧಿ ಮಸೂದೆ ಇದಾಗಿದೆ ಎಂದು ಕಾಂಗ್ರೆಸ್ ಹೇಳಿದ್ದು ರೈತರ ಮರಣ ಶಾಸನಕ್ಕೆ ಸಹಿ ಹಾಕುವುದಿಲ್ಲ ಎಂದಿದೆ. 

ಸರ್ಕಾರ ಈ ಮಸೂದೆಗಳಿಂದ ಯಾರಿಗೆ ಒಳಿತಾಗಲಿದೆ ಎನ್ನುತ್ತಿದೆಯೋ ಅವರೇ ಬೀದಿಗಿಳಿದಿದ್ದಾರೆ. ಈ ಮಸೂದೆಗಳಿಂದ ಸರ್ಕಾರ ಕನಿಷ್ಟ ಬೆಂಬಲ ಬೆಲೆ ನೀಡಿ ಬೆಳೆಗಳನ್ನು ಖರೀದಿಸುವ ಪ್ರಕ್ರಿಯೆ ಕೊನೆಯಾಗಲಿದೆ ಎಂದೂ ಕಾಂಗ್ರೆಸ್ ಆರೋಪಿಸಿದೆ.
 

SCROLL FOR NEXT