ದೇಶ

ರಾಷ್ಟ್ರಪತಿ ಭೇಟಿಗೆ ಪ್ರತಿಪಕ್ಷಗಳ ಪ್ರಯತ್ನ, ಕೃಷಿ ಮಸೂದೆಗೆ ಅಂಕಿತ ಹಾಕದಂತೆ ಒತ್ತಾಯ

Nagaraja AB

ನವದೆಹಲಿ: ತೀವ್ರ ವಿರೋಧದ ನಡುವೆ ವಿವಾದಾತ್ಮಕ ಕೃಷಿ ಮಸೂದೆಗಳು ರಾಜ್ಯಸಭೆಯಲ್ಲಿ ಅಂಗೀಕಾರ ಗೊಂಡ ಬೆನ್ನಲ್ಲೇ, ಸರ್ಕಾರ ತನ್ನ ಕಾರ್ಯಸೂಚಿಯನ್ನು ವಿಧಾನದ ಬಗ್ಗೆ ಎನ್ ಡಿಯಯೇತರ ಪಕ್ಷಗಳು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದು, ಪ್ರಸ್ತಾವಿತ ಮಸೂದೆಗಳಿಗೆ ಅಂಕಿತ ಹಾಕದಂತೆ ಒತ್ತಾಯಿಸಿವೆ.

ಕಾಂಗ್ರೆಸ್, ಎಡ ಪಕ್ಷಗಳು, ಎನ್ ಸಿಪಿ, ಡಿಎಂಕೆ, ಎಸ್ ಪಿ, ತೃಣಮೂಲ ಕಾಂಗ್ರೆಸ್ ಮತ್ತು ಆರ್ ಜೆಡಿ ಪಕ್ಷಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಈ ವಿಚಾರದಲ್ಲಿ ರಾಷ್ಟ್ರಪತಿ ಮಧ್ಯ ಪ್ರವೇಶಿಸುವಂತೆ ಮನವಿ ಸಲ್ಲಿಸಿದ್ದು, ಮಸೂದೆಗಳಿಗೆ ಅಂಕಿತ ಹಾಕದಂತೆ ಆಗ್ರಹಿಸಿವೆ. ರಾಷ್ಟ್ರಪತಿ ಅಂಕಿತದ ನಂತರವಷ್ಟೇ ಮಸೂದೆಗಳು ಕಾನೂನಾಗಿ ಜಾರಿಗೆ ಬರಲಿವೆ.

ಕೃಷಿಕ್ಷೇತ್ರದ ಅತಿದೊಡ್ಡ ಸುಧಾರಣೆ ಎಂದು ಸರ್ಕಾರ ಬಣ್ಣಿಸುತ್ತಿರುವ ಮಹತ್ವದ ಎರಡು ಮಸೂದೆಗಳು  ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ರಾಜ್ಯಸಭೆಯಲ್ಲಿ ಭಾನುವಾರ ಅಂಗೀಕಾರಗೊಂಡವು.

ಆಡಳಿತರೂಢ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವವನ್ನು ಕಗ್ಗೂಲೆ ಮಾಡುವ ಮೂಲಕ ಕೃಷಿ ಮಸೂದೆಗಳನ್ನು ಅಂಗೀಕರಿಸಿದೆ ಎಂದು ಪ್ರತಿಪಕ್ಷಗಳು ಬಣ್ಣಿಸಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೊಂದಿಗೆ ಸಭೆ ನಡೆಸಲು ಬಯಸಿವೆ.ಬಹುಶ: ಗುರುವಾರ ಸಭೆ ನಡೆಯುವ ಸಾಧ್ಯತೆಯಿದ್ದು, ಪ್ರತಿಪಕ್ಷಗಳ ಮುಖಂಡರು ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕೃಷಿ ಮಸೂದೆಗಳು ರೈತರ ಹಿತಾಸಕ್ತಿಗೆ ವಿರುದ್ಧವಾಗಿದ್ದು, ರೈತರ ಭೂಮಿಯನ್ನು ಬಂಡವಾಳಷಾಹಿಗಳಿಗೆ ನೀಡುವ ಹುನ್ನಾರ ನಡೆದಿವೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

SCROLL FOR NEXT