ದೇಶ

ಕೋವಿಡ್ ಮುಂಜಾಗ್ರತೆಗಳೊಂದಿಗೆ ಇಂದಿನಿಂದ ತಾಜ್ ಮಹಲ್ ಪ್ರವಾಸಿಗರಿಗೆ ಮುಕ್ತ, ಆದರೆ ಷರತ್ತು ಅನ್ವಯ!

Srinivasamurthy VN

ಆಗ್ರಾ: ಪ್ರೇಮಸೌಧವೆಂದೇ ಖ್ಯಾತಿಗಳಿಸಿರುವ ತಾಜ್ ಮಹಲ್ ಸತತ 6 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಪ್ರವಾಸಿಗರ ವೀಕ್ಷಣೆಗೆ ಇಂದಿನಿಂದ ಮುಕ್ತವಾಗಿದೆ.

ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ತಾಜ್ ಮಹಲ್ ಅನ್ನು ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧ ಹೇರಲಾಗಿತ್ತು. ಬಳಿಕ ಸತತ ಆರು ತಿಂಗಳ ಬಳಿಕ ಅಂದರೆ ಸೆಪ್ಟೆಂಬರ್ 1ರಿಂದ ಕೇಂದ್ರ ಸರ್ಕಾರ ತಾಜ್ ಮಹಲ್ ಹೊರತು ಪಡಿಸಿ ಎಲ್ಲಾ ಸ್ಮಾರಕಗಳನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಿತ್ತು. ಕೇಂದ್ರ  ಸರ್ಕಾರದ ಗೃಹ ಸಚಿವಾಲಯದ ಮಾರ್ಗಸೂಚಿ ಪ್ರಕಾರ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳಗಳ ಪ್ರವೇಶ ಮುಕ್ತವಾಗಿದೆ. ತಾಜ್ ಮಹಲ್ ಅನ್ನೂ ಕೂಡ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.

ದೇಶದಲ್ಲಿ ಕೊರೋನಾ ವ್ಯಾಪಕವಾಗಿ ಹೆಚ್ಚುತ್ತಿದೆ. ಹೀಗಾಗಿ ತಡವಾಗಿ ತಾಜ್‍ಮಹಲ್‍ ಮತ್ತು ಆಗ್ರಾ ಕೋಟೆಗಳಿಗೆ ಅವಕಾಶ ನೀಡಲಾಗುವುದು ಎಂದು ಆಗ್ರಾದ ಜಿಲ್ಲಾಧಿಕಾರಿ ಆದೇಶಿಸಿದ್ದರು. ಆದರೆ ಪ್ರತಿದಿನಕ್ಕೆ 5 ಸಾವಿರ ಪ್ರವಾಸಿಗರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗಿದೆ. ಈಗಲೂ ಕೊರೊನಾ ಹರಡುವಿಕೆ  ನಿಲ್ಲದ ಕಾರಣ ದಿನವೊಂದಕ್ಕೆ ಕೇವಲ 5 ಸಾವಿರ ಪ್ರವಾಸಿಗರಿಗೆ ಮಾತ್ರ ತಾಜಮಹಲ್ ವೀಕ್ಷಣೆಗೆ ಅವಕಾಶ ನೀಡಲಾಗುತ್ತಿದೆ. ಅಲ್ಲದೆ ಆಗ್ರಾ ಕೋಟೆಗೆ ದಿನವೊಂದಕ್ಕೆ 2,500 ಪ್ರವಾಸಿಗರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೊರೋನಾ ಹರಡುವಿಕೆ ಈಗಲೂ ಕಡಿಮೆಯಾಗದ ಕಾರಣದಿಂದ  ಪ್ರವಾಸಿಗರಿಗೆ ಈಗ ಎಲೆಕ್ಟ್ರಾನಿಕ್ ಟಿಕೆಟ್ ನೀಡಲಾಗುವುದು. ಪ್ರವಾಸಿಗರು ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

SCROLL FOR NEXT