ದೇಶ

ಚೀನಾಕ್ಕೆ ಭಾರತದ ಖಡಕ್ ಎಚ್ಚರಿಕೆ

Srinivas Rao BV

ನವದೆಹಲಿ: ಗಡಿಯಲ್ಲಿ ಮುಂದುವರಿದಿರುವ ಸಂಘರ್ಷ ಪರಿಸ್ಥಿತಿ ಹಿನ್ನೆಲೆಯಲ್ಲಿ ಭಾರತ-ಚೀನಾ ನಡುವೆ ಮಾತುಕತೆಗಳು   ನಡೆಯುತ್ತಿವೆ. 

ಆರನೇ ಸುತ್ತಿನ ಸೇನಾ ಕಮಾಂಡರ್-ಮಟ್ಟದ ಮಾತುಕತೆ ಸೋಮವಾರ ಬೆಳಿಗ್ಗೆ 9 ಗಂಟೆಯಿಂದ  ಚೀನಾದ ಮೊಲ್ಡೊವಾ ಪ್ರದೇಶದಲ್ಲಿ  ಪ್ರಾರಂಭಗೊಂಡು ರಾತ್ರಿ 9 ಗಂಟೆಯವರೆಗೆ ಮುಂದುವರೆಯಿತು.

ಸುಮಾರು 12 ಗಂಟೆಗಳ ಕಾಲ ನಡೆದ ಮಾತುಕತೆಯಲ್ಲಿ, ಭಾರತ,  ಚೀನಾ ತನ್ನ  ಪಡೆಗಳನ್ನು ಸಂಘರ್ಷದ ಪ್ರದೇಶಗಳಿಂದ ಹಿಂತೆಗೆದುಕೊಳ್ಳಲು ಒತ್ತಾಯಿಸಿದೆ ಎಂದು ವರದಿಯಾಗಿದೆ. ಉಭಯ ದೇಶಗಳು ಸಮ್ಮತಿಸಿರುವ  ಐದು ಅಂಶಗಳ ಒಪ್ಪಂದವನ್ನು ಅನುಷ್ಠಾನಗೊಳಿಸುವ  ಕೇಂದ್ರೀಕೃತವಾಗಿ ಮಾತುಕತೆ ನಡೆಸಲಾಗಿದೆ.

ಚೀನಾ ಮೊದಲು ತನ್ನ ಸೇನೆಯನ್ನು  ಹಿಂತೆಗೆದುಕೊಳ್ಳಬೇಕೆಂದು ಭಾರತ ಒತ್ತಾಯಿಸಿದೆ ಎಂದು ವರದಿಯಾಗಿದೆ. ಚೀನಾ ಒಳನುಸುಳಲು  ಮೊದಲು ಪ್ರಯತ್ನಿಸಿದ ಕಾರಣ, ಮೊದಲು ತನ್ನ ಸೇನೆಯನ್ನು  ಹಂತೆಗೆದುಕೊಳ್ಳಬೇಕು ಭಾರತ ಹೇಳಿದೆ ಎಂದು ವರದಿಯಾಗಿದೆ. ಪ್ಯಾಂಗ್ಯಾಂಗ್ ತ್ಸೋ, ಹಾಟ್ ಸ್ಪ್ರಿಂಗ್ಸ್, ಡೆಪ್ಸಾಂಗ್ ಹಾಗೂ  ಫಿಂಗರ್ ಪ್ರದೇಶಗಳಿಂದ ತಕ್ಷಣವೇ ಚೀನಾ ತನ್ನ ಸೇನೆಯನ್ನು  ಹಿಂತೆಗೆದುಕೊಳ್ಳಬೇಕೆಂದು ಭಾರತ ಒತ್ತಾಯಿಸಿದೆ. 

ಒಂದು  ವೇಳೆ ಚೀನಾ ಯಥಾಸ್ಥಿತಿಯನ್ನು ಪುನಃಸ್ಥಾಪಿಸದಿದ್ದರೆ, ಭಾರತೀಯ ಪಡೆಗಳನ್ನು ದೀರ್ಘಕಾಲದವರೆಗೆ ನಿಯೋಜಿಸಲಾಗುವುದು ಎಂದು ಭಾರತ ಎಚ್ಚರಿಸಿದೆ. ಈವರೆಗೆ ಐದು ಸುತ್ತಿನ ಮಾತುಕತೆಗಳು ನಡೆದಿದ್ದರೂ ಯಾವುದೇ ಮಹತ್ವದ ಪ್ರಗತಿಕಂಡುಬಂದಿರಲಿಲ್ಲ. ಇನ್ನೂ ನಿನ್ನೆ ನಡೆದ  ಮಾತುಕತೆಯಲ್ಲಿ ಭಾರತೀಯ ಸೇನೆಯ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ನೇತೃತ್ವದ ನಿಯೋಗ, ದಕ್ಷಿಣ ಕ್ಸಿನ್ ಜಿಯಾಂಗ್ ಮಿಲಿಟರಿಯ ಕಮಾಂಡರ್ ಮೇಜರ್ ಜನರಲ್ ಲಿಯು ಲಿನ್  ಚೀನಾ  ನಿಯೋಗದೊಂದಿಗೆ  ಮಾತುಕತೆ ನಡೆಸಿತು.

SCROLL FOR NEXT