ದೇಶ

ಶಾಸಕರ ಕಚೇರಿಯಿಂದಲೇ ಸಚಿವರ ಸಹಾಯಕನ ಅಪಹರಣ, ಕೆಲವೆ ಗಂಟೆಯಲ್ಲಿ ರಕ್ಷಿಸಿದ ಪೊಲೀಸರು!

Vishwanath S

ಕೊಯಮ್ಮತ್ತೂರ್: ತಮಿಳುನಾಡು ಪಶುಸಂಗೋಪನಾ ಸಚಿವ ಉದುಮಲೈ ಕೆ ರಾಧಾಕೃಷ್ಣನ್ ಅವರ ವೈಯಕ್ತಿಕ ಸಹಾಯಕ ಕರ್ಣನ್ ಅವರನ್ನು ಉದುಮಲೈಪೆಟೆ ಶಾಸಕರ ಕಚೇರಿಯಿಂದ ನಾಲ್ಕು ಮಂದಿ ಗ್ಯಾಂಗ್ ಇಂದು ಬೆಳಿಗ್ಗೆ ಅಪಹರಿಸಿದ್ದು ಇದಾದ ಕೆಲವೇ ಗಂಟೆಗಳಲ್ಲಿ ಆತನನ್ನು ಪೊಲೀಸರು ರಕ್ಷಿಸಿದ್ದಾರೆ.

ಉದುಮಲೈಪೇಟೆಯ ಅನ್ಸಾರಿ ಸ್ಟ್ರೀಟ್‌ನಲ್ಲಿರುವ ಶಾಸಕರ ಕಚೇರಿಗೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕಾರಿನಲ್ಲಿ ಬಂದು ಒಳ ನುಗ್ಗಿದ್ದ ನಾಲ್ಕು ಮಂದಿ ತಂಡ ಕೆಲವೇ ನಿಮಿಷಗಳಲ್ಲಿ ತಮ್ಮ ಕಾರಿನಲ್ಲಿ ಸಚಿವರ ಪಿಎ ಕರ್ಣನ್ ಅವರನ್ನು ಅಪಹರಿಸಿದರು.

ಘಟನೆಯ ನಂತರ, ತಿರುಪುರ ಪೊಲೀಸ್ ವರಿಷ್ಠಾಧಿಕಾರಿ ದಿಶಾ ಮಿತ್ತಲ್ ಮತ್ತು ಉದುಮಲೈಪೇಟೆ ಉಪ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದರು.

ಎಂಎಲ್ಎಗಳ ಕಚೇರಿಯಲ್ಲಿ ದಾಖಲಾದ ಸಿಸಿಟಿವಿ ದೃಶ್ಯಾವಳಿಗಳನ್ನುಪೊಲೀಸರು ಪರಿಶೀಲಿಸಿದಾಗ ಕರ್ಣನನ್ನು ಕಾರಿನಲ್ಲಿ ಅಪಹರಿಸಿದ್ದು ಕಂಡಿದೆ. 

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ತಿರುಪುರ ಪೊಲೀಸ್ ವರಿಷ್ಠಾಧಿಕಾರಿ ದಿಶಾ ಮಿತ್ತಲ್, ಸಚಿವರ ಪಿಎ ಕರ್ಣನ್ ಅವರನ್ನು ಪೊಲೀಸ್ ಸಿಬ್ಬಂದಿ ತಂಡ ಪತ್ತೆ ಹಚ್ಚಿ ರಕ್ಷಿಸಲಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.

SCROLL FOR NEXT