ದೇಶ

ಐಐಟಿಗಳಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣ: ಪಿಐಎಲ್ ಹಾಕಿದ್ದ ವಕೀಲರಿಗೆ 10 ಸಾವಿರ ರೂ. ದಂಡ ವಿಧಿಸಿದ 'ಸುಪ್ರೀಂ'

Srinivas Rao BV

ನವದೆಹಲಿ: ಐಐಟಿಗಳಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಪಿಐಎಲ್ ಸಲ್ಲಿಸಿದ್ದ ವಕೀಲರಿಗೆ ಸುಪ್ರೀಂ ಕೋರ್ಟ್ 10 ಸಾವಿರ ರೂಪಾಯಿ ದಂಡ ವಿಧಿಸಿದೆ. 

ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟುವುದಕ್ಕೆ ಸ್ಟೂಡೆಂಟ್ಸ್ ವೆಲ್ನೆಸ್ ಪ್ರೋಗ್ರಾಮ್ ನ್ನು ನಡೆಸಲು ಐಐಟಿಗಳಿಗೆ ನಿರ್ದೇಶನ ನೀಡಬೇಕೆಂದು ಪಿಐಎಲ್ ನಲ್ಲಿ ಕೋರಲಾಗಿತ್ತು. 

ಪಿಐಎಲ್ ನ್ನು ಸುಪ್ರೀಂ ಕೋರ್ಟ್ ಕ್ಷುಲ್ಲಕ ಎಂದು ಹೇಳಿದೆ. ಗೌರವ್ ಬನ್ಸಾಲ್ ಎಂಬುವವರು ಪಿಐಎಲ್ ಸಲ್ಲಿಸಿದ್ದರು. ಇದು ಕ್ಷುಲ್ಲಕ ಅರ್ಜಿ, ಇದಕ್ಕೆ ಎಷ್ಟು ದಂಡ ವಿಧಿಸಬೇಕೆಂದು ನೀವೇ ಹೇಳಿ ಎಂದು ನ್ಯಾ. ಆರ್ ಎಫ್ ನಾರಿಮನ್ ಹೇಳಿದ್ದಾರೆ.  ಅರ್ಜಿಯನ್ನು ತಿರಸ್ಕರಿಸಿ 10,000 ರೂಪಾಯಿ ದಂಡ ವಿಧಿಸುತ್ತಿದ್ದೇನೆ ಎಂದು ಕೋರ್ಟ್ ಹೇಳಿದೆ.

SCROLL FOR NEXT