ದೇಶ

ರಾಜಕೀಯಕ್ಕೆ ಪ್ರವೇಶಿಸುವುದರ ಬಗ್ಗೆ ಬಿಹಾರದ ಮಾಜಿ ಡಿಜಿಪಿ ಗುಪ್ತೇಶ್ವರ್ ಪಾಂಡೇ ಹೇಳಿದ್ದಿಷ್ಟು 

Srinivas Rao BV

ನವದೆಹಲಿ: ಬಿಹಾರದ ಡಿಜಿಪಿ ಗುಪ್ತೇಶ್ವರ್ ಪಾಂಡೇ ಸ್ವಯಂ ನಿವೃತ್ತಿ ಪಡೆದಿದ್ದು, ರಾಜಕೀಯ ಪ್ರವೇಶಿಸುವುದರ ಬಗ್ಗೆ ಊಹಾಪೋಹಗಳು ಹೆಚ್ಚಿವೆ. 

ತಾವು ರಾಜಕೀಯ ಪ್ರವೇಶಿಸುವ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗುಪ್ತೇಶ್ವರ್ ಪಾಂಡೆ, ತಮ್ಮ ತವರು ಜಿಲ್ಲೆಯ ಬಕ್ಸರ್ ನ ಜನತೆ ಆಶಿಸಿದಲ್ಲಿ ಮಾತ್ರವೇ ತಾವು ರಾಜೀಯ ಪ್ರವೇಶಿಸುವುದಾಗಿ ಹೇಳಿದ್ದಾರೆ.

ಬೇಗ್ಸರಾಯ್, ಸೀತಾಮಾರ್ಹಿ, ಶಾಪುರ್ ಸೇರಿದಂತೆ ಹಲವು ಜಿಲ್ಲೆಗಳಿಂದ ಜನರು ತಮ್ಮನ್ನು ಭೇಟಿ ಮಾಡಲು ಆಗಮಿಸುತ್ತಿದ್ದು, ಚುನಾವಣೆಗೆ ಸ್ಪರ್ಧಿಸುವುದೇ ಆದರೆ ತಮ್ಮ ಜಿಲ್ಲೆಯಿಂದಲೇ ಸ್ಪರ್ಧಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಬಕ್ಸರ್ ನನ್ನ ತವರು ಜಿಲ್ಲೆ, ನಾನು ಅಲ್ಲೇ ಹುಟ್ಟಿ ಬೆಳೆದಿದ್ದು, ನಾನು ಚುನಾವಣೆಗೆ ಸ್ಪರ್ಧಿಸುವುದು ಬಿಡುವುದು ಅವರ ನಿರ್ಧಾರದ ಮೇಲೆ ಅವಲಂಬಿತವಾಗರಲಿದೆ ಎಂದು ಗುಪ್ತೇಶ್ವರ್ ಪಾಂಡೇ ತಿಳಿಸಿದ್ದಾರೆ.

2014 ರಲ್ಲಿಯೂ ಸ್ವಯಂ ನಿವೃತ್ತಿಗೆ ಮನವಿ ಮಾಡಿದ್ದ ಪಾಂಡೇ ಬಿಜೆಪಿ ಟಿಕೆಟ್ ನಿಂದ ಚುನಾವಣೆಗೆ ಸ್ಪರ್ಧಿಸುವ ವದಂತಿ ಇತ್ತು. ಆದರೆ ಸ್ವಯಂ ನಿವೃತ್ತಿಗೆ ಮನವಿ ಮಾಡಿದ್ದ 9 ತಿಂಗಳೊಳಗಾಗಿ ರಾಜೀನಾಮೆ ಹಿಂಪಡೆದು ಪುನಃ ಸೇವೆಗೆ ಮರಳಲು ಮನವಿ ಸಲ್ಲಿಸಿದ್ದರು. ಬಿಹಾರ ಸರ್ಕಾರ ಇವರ ಮನವಿಯನ್ನು ಒಪ್ಪಿ ಪುನಃ ಸೇವೆಗೆ ಮರಳಲು ಅವಕಾಶ ನೀಡಿತ್ತು.

SCROLL FOR NEXT