ದೇಶ

ರೈತರ ಸಮಾಧಾನಪಡಿಸಲು ಹರಿಯಾಣ, ಪಂಜಾಬ್‌ನಲ್ಲಿ ತಕ್ಷಣ ಭತ್ತ ಖರೀದಿಗೆ ಕೇಂದ್ರ ಆದೇಶ

Lingaraj Badiger

ಚಂಡೀಗಢ: ಪ್ರತಿಭಟನಾ ನಿರತ ರೈತರನ್ನು ಸಮಾಧಾನಗೊಳಿಸುವ ಯತ್ನಿಸಿರುವ ಕೇಂದ್ರ ಸರ್ಕಾರ ಶನಿವಾರದಿಂದ ಪಂಜಾಬ್ ಮತ್ತು ಹರಿಯಾಣದಲ್ಲಿ ಕನಿಷ್ಠ ಬೆಂಬಲ ಬೆಲೆಗೆ(ಎಂಎಸ್‌ಪಿ) ಭತ್ತ ಖರೀದಿಸಲು ಅನುಮತಿ ನೀಡಿದೆ.

ಭತ್ತ ಖರೀದಿಗಾಗಿ ಖಾರಿಫ್ ಮಾರ್ಕೆಟಿಂಗ್ ಸೀಸನ್(ಕೆಎಂಎಸ್) ಅಕ್ಟೋಬರ್ 1 ರಿಂದ ಎಲ್ಲಾ ರಾಜ್ಯಗಳಲ್ಲಿ ಆರಂಭವಾಗಬೇಕಿತ್ತು. ಆದರೆ ಕೃಷಿ ಮಸೂದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸೀಸನ್ ಗೂ ಮುನ್ನವೇ ಭತ್ತ ಖರೀದಿಗೆ ಆದೇಶಿಸಿದೆ.

ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಈ ಸಂಬಂಧ ಆದೇಶ ಹೊರಡಿಸಿದೆ.

"ಹರಿಯಾಣ ಮತ್ತು ಪಂಜಾಬ್‌ನ 'ಮಂಡಿಸ್'ಗೆ ಭತ್ತ ಬೇಗ ಬಂದಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಎರಡೂ ರಾಜ್ಯಗಳಲ್ಲಿ ಭತ್ತ / ಅಕ್ಕಿ ಖರೀದಿ ಕಾರ್ಯಾಚರಣೆಯನ್ನು ಇಂದಿನಿಂದಲೇ ಪ್ರಾರಂಭಿಸಲು ಕೇಂದ್ರ ಸರ್ಕಾರ ಅನುಮೋದಿಸಿದೆ ಎಂದು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.

ಇಂದಿನಿಂದಲೇ ಜಾರಿಗೆ ಬರುವಂತೆ ರೈತರು ತಮ್ಮ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಗೆ(ಎಂಎಸ್‌ಪಿ) ತ್ವರಿತವಾಗಿ ಮಾರಾಟ ಮಾಡಲು ಅನುಕೂಲವಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಕೇಂದ್ರ ಪ್ರಸಕ್ತ ವರ್ಷದಲ್ಲಿ 'ಸಾಮಾನ್ಯ ವೈವಿಧ್ಯಮಯ' ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ 1,868 ರೂ. ಮತ್ತು 'ಎ' ದರ್ಜೆಯ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ 1,888 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದೆ.

SCROLL FOR NEXT