ದೇಶ

ಮಸೀದಿ ತೆಗೆದು ಕೃಷ್ಣ ಜನ್ಮಭೂಮಿಯ ಹಕ್ಕಿಗಾಗಿ ಕಾನೂನು ಸಮರ ಪ್ರಾರಂಭ! 

Srinivas Rao BV

ಮಥುರಾ: ಸಿಬಿಐ ಕೋರ್ಟ್ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು ನೀಡಲು ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಮಥುರಾದ ಕೃಷ್ಣ ಜನ್ಮಭೂಮಿ ಒಡೆತನದ ಹಕ್ಕು ಕೋರ್ಟ್ ಮೆಟ್ಟಿಲೇರಿದೆ. 

13.37 ಎಕರೆಗಳಷ್ಟು ಪ್ರದೇಶ ಕೃಷ್ಣ ಜನ್ಮಭೂಮಿಗೆ ಸೇರಬೇಕು ಹಾಗೂ ಅಲ್ಲಿರುವ ಶಾಹಿ ಈದ್ಗಾ ಮಸೀದೆಯನ್ನು ತೆಗೆಯಬೇಕೆಂದು ಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. 

ಭಗವಾನ್ ಶ್ರೀಕೃಷ್ಣ ವಿರಾಜ್ಮಾನ್ ಕತ್ರಾ ಕೇಶವ್ ದೇವ್ ಖೇವಾತ್, ಮೌಜಾ ಮಥುರಾ ಬಝಾರ್ ಸಿಟಿ, ರಂಜನಾ ಅಗ್ನಿಹೋತ್ರಿ ಹಾಗೂ ಇನ್ನು 6 ಭಕ್ತಾದಿಗಳು ಕೋರ್ಟ್ ಮೊರೆಗೆ ಹೋಗಿದ್ದಾರೆ. 

ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದಲ್ಲಿ ಹಿಂದೂ ಮಹಾಸಭಾದ ಪರವಾಗಿ ಅಗ್ನಿಹೋತ್ರಿ ವಾದ ಮಂಡಿಸಿದ್ದರು.

SCROLL FOR NEXT