ದೇಶ

ವರ್ಚುವಲ್ ಶೃಂಗಸಭೆ: ಬೌದ್ಧ ಸಂಬಂಧ ಉತ್ತೇಜಿಸಲು ಭಾರತದಿಂದ ಲಂಕಾಗೆ 15 ಮಿಲಿಯನ್ ಅಮೆರಿಕನ್ ಡಾಲರ್ ನೆರವು

Vishwanath S

ನವದೆಹಲಿ: ಉಭಯ ದೇಶಗಳ ನಡುವಿನ ಬೌದ್ಧ ಸಂಬಂಧಗಳ ಉತ್ತೇಜನಕ್ಕಾಗಿ ಭಾರತವು ಶ್ರೀಲಂಕಾಕ್ಕೆ 15 ಮಿಲಿಯನ್ ಅಮೆರಿಕನ್ ಡಾಲರ್ ಅನುದಾನ ನೆರವು ಘೋಷಿಸಿದೆ ಎಂದು ವಿದೇಶಾಂಗ ಸಚಿವಾಲಯ(ಎಂಇಎ) ಶನಿವಾರ ತಿಳಿಸಿದೆ.

ಭಾರತ-ಶ್ರೀಲಂಕಾ ವರ್ಚುವಲ್ ದ್ವಿಪಕ್ಷೀಯ ಶೃಂಗಸಭೆಯಲ್ಲಿ "ಉಭಯ ದೇಶಗಳ ನಡುವಿನ ದೀರ್ಘ ಮತ್ತು ನಾಗರಿಕ ಸಂಬಂಧಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಾಕ್ಷೀಕರಿಸಿದ ಪ್ರಧಾನಿ ಮೋದಿ, ಉಭಯ ದೇಶಗಳ ನಡುವಿನ ಬೌದ್ಧ ಸಂಬಂಧಗಳ ಉತ್ತೇಜನಕ್ಕಾಗಿ 15 ಮಿಲಿಯನ್ ಅಮೆರಿಕನ್ ಡಾಲರ್ ಅನುದಾನವನ್ನು ಘೋಷಿಸಿದರು ಎಂದು ಹಿಂದೂ ಮಹಾಸಾಗರ ಪ್ರದೇಶ ವಿಭಾಗದ(ಐಒಆರ್) ಜಂಟಿ ಕಾರ್ಯದರ್ಶಿ ಅಮ್ತ್ ನಾರಂಗ್ ಹೇಳಿದ್ದಾರೆ.

"ಈ ಅನುದಾನವು ಬೌದ್ಧಧರ್ಮದ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವಿನ ಜನರ ಸಂಪರ್ಕವನ್ನು ಗಾಢವಾಗಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಪ್ರಸ್ತುತ ಕೋವಿಡ್ ನಿರ್ಬಂಧ ಹಿನ್ನೆಲೆಯಲ್ಲಿ ವರ್ಚುವಲ್ ಶೃಂಗಸಭೆ ಯಶಸ್ವಿಯಾಗಿ ನಡೆದಿದ್ದು ದ್ವಿಪಕ್ಷೀಯ ಸಂಬಂಧಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವುದರಲ್ಲಿ ಉಭಯ ನಾಯಕರ ಬದ್ಧತೆ ಪ್ರದರ್ಶನವಾಗಿದೆ ಎಂದು ಎಂಇಎ ಅಧಿಕಾರಿ ಹೇಳಿದ್ದಾರೆ.

ಶೃಂಗಸಭೆಯಲ್ಲಿ, ಉಭಯ ನಾಯಕರು ದ್ವಿಪಕ್ಷೀಯ ವಿಷಯದ ಉನ್ನತ ಶ್ರೇಣಿಯನ್ನು ಪರಿಶೀಲಿಸಿದರು. ಜೊತೆಗೆ ಸಾಮಾನ್ಯ ಒಮ್ಮತದ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದರು.

"ಉತ್ತರ ಪ್ರದೇಶದ ಕುಶಿನಗರಕ್ಕೆ ಮೊದಲ ಉದ್ಘಾಟನಾ ಹಾರಾಟದಲ್ಲಿ ಶ್ರೀಲಂಕಾದಿಂದ ಬೌದ್ಧ ಯಾತ್ರಿಕರ ನಿಯೋಗದ ಭಾರತ ಭೇಟಿಗೆ ಅನುಕೂಲವಾಗಲಿದೆ ಎಂದು ಎಂಇಎ ಅಧಿಕಾರಿ ತಿಳಿಸಿದ್ದಾರೆ.

"ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ಲಂಕಾದಲ್ಲಿನ ಜಾಫ್ನಾ ಸಾಂಸ್ಕೃತಿಕ ಕೇಂದ್ರದ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ. ಇದು ಭಾರತದ ನೆರವಿನೊಂದಿಗೆ ನಿರ್ಮಿಸಲಾದ ಅಪ್ರತಿಮ ಯೋಜನೆಯಾಗಿದೆ. ಕೇಂದ್ರವು ಬಹುತೇಕ ಸಿದ್ಧವಾಗಿದ್ದು ಉದ್ಘಾಟಿಣೆಗಾಗಿ ಪ್ರಧಾನಿ ಮೋದಿಯವರಿಗೆ ಆಹ್ವಾನವನ್ನು ನೀಡಿದರು ಎಂದು ಎಂಇಎ ತಿಳಿಸಿದೆ.

SCROLL FOR NEXT