ದೇಶ

ರೈಲು ನಿಲ್ದಾಣಗಳ ಪುನಾಭಿವೃದ್ಧಿಗಾಗಿ ಪ್ರಯಾಣಿಕರಿಗೆ 10-35 ರೂ. ಬಳಕೆದಾರ ಶುಲ್ಕ ವಿಧಿಸಲು ಮುಂದಾದ ರೈಲ್ವೆ ಇಲಾಖೆ?

Raghavendra Adiga

ನವದೆಹಲಿ: ಅತ್ಯಾಧುನಿಕ ಸೌಕರ್ಯಗಳೊಂದಿಗೆ ರಲು ನಿಲ್ದಾಣಗಳನ್ನು ಪುನರಾಭಿವೃದ್ಧಿಪಡಿಸಲು  ರೈಲ್ವೆ ಪ್ರಯಾಣಿಕರು ಟಿಕೆಟ್ ದರಗಳಿಗೆ ಹೆಚ್ಚುವರಿ 10-35 ರೂ.  ನೀಡಬೇಕಾಗಬಹುದು ಎಂದು ಮೂಲಗಳು ಹೇಳಿದೆ.

ರೈಲ್ವೆ ಅಂತಿಮಗೊಳಿಸಬೇಕಿರುವ ಪ್ರಸ್ತಾವನೆಯ ಭಾಗ ಇದಾಗಿದ್ದು, ಶೀಘ್ರದಲ್ಲೇ ಕ್ಯಾಬಿನೆಟ್ ಅನುಮೋದನೆಗೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಬಳಕೆದಾರರ ಶುಲ್ಕವು ಕ್ಲಾಸ್ ಗೆ ಅನುಗುಣವಾಗಿ ಬದಲಾಗುತ್ತದೆ - ಇದು ಎಸಿ ಪ್ರಥಮ ದರ್ಜೆ ಪ್ರಯಾಣಿಕರಿಗೆ ಹೆಚ್ಚಿನ ಬೆಲೆಯೊಂದಿಗೆ 10 ರಿಂದ 35 ರೂ. ಆಗಿರಲಿದೆ. ಹೆಚ್ಚಿನ ಜನದಟ್ಟಣೆ ಹಿಂದಿರುವ ನಿಲ್ದಾಣಗಳಲ್ಲಿ ಮಾತ್ರ ಬಳಕೆದಾರರ ಶುಲ್ಕವನ್ನು ವಿಧಿಸಲಾಗುವುದು ಎಂದು ರೈಲ್ವೆ ಈ ಹಿಂದೆ ಸ್ಪಷ್ಟಪಡಿಸಿತ್ತು. ದೇಶದ ಒಟ್ಟು 7,000 ರೈಲ್ವೆ ನಿಲ್ದಾಣಗಳಲ್ಲಿ ಸುಮಾರು 700-1,000 ನಿಲ್ದಾನಗಳೂ ಈ ವಿಭಾಗದಲ್ಲಿ ಬರುತ್ತದೆ.

ವಿಮಾನ ಪ್ರಯಾಣಿಕರಿಗೆ ವಿಧಿಸಲಾಗುವ ಇಂತಹ ಶುಲ್ಕವನ್ನು ರೈಲು ಬಳಕೆದಾರರಿಂದ ವಸೂಲಿ ಮಾಡುತ್ತಿರುವುದು ಇದು ಮೊದಲ ಬಾರುಯಾಗಿದೆ. ವಿವಿಧ ವಿಮಾನ ನಿಲ್ದಾಣಗಳಲ್ಲಿ ಯುಡಿಎಫ್ ಶುಲ್ಕ ವಿಧಿಸಲಾಗುತ್ತದೆ ಮತ್ತುಈ ದರ ನಗರದಿಂದ ನಗರಕ್ಕೆ ಬದಲಾಗುತ್ತದೆ.

"ಬಳಕೆದಾರರ ಶುಲ್ಕಗಳು ಮೂಲಭೂತವಾಗಿ ಒಂದು ಸಣ್ಣ ಟೋಕನ್ ಮೊತ್ತವಾಗಿದ್ದು, ಅದನ್ನು ಸಂಗ್ರಹಿಸಿದಾಗ, ರೈಲ್ವೆ ನಿಲ್ದಾಣದಲ್ಲಿನ ಎಲ್ಲಾ ಪ್ರಯಾಣಿಕರಿಗೆ ಅನುಕೂಲಗಳು ಮತ್ತು ಸೌಲಭ್ಯಗಳ ಸುಧಾರಣೆಗೆ ಮತ್ತೆ ಬಳಕೆ ಮಾಡಲಾಗುತ್ತದೆ." ಎಂದು ರೈಲ್ವೆ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

"ಈ ಶುಲ್ಕದ ಮೊತ್ತವು ತುಂಬಾ ಸಮಂಜಸವಾದದ್ದು ಹಾಗೂ  ಕನಿಷ್ಠವಾದದ್ದು ಎಂದು ನಿರೀಕ್ಷಿಸಲಾಗಿದೆ ಇದರಿಂದ ಯಾರೊಬ್ಬರಲ್ಲೂ ವಿಶೇಷವಾಗಿ ಸಾಮಾನ್ಯ ಜನರ ಮೇಲೆ ಯಾವುದೇ ಹೊರೆ ಬೀಳುವುದಿಲ್ಲ. ಈ ಕಡಿಮೆ ಶುಲ್ಕವನ್ನು  ಪಾದಚಾರಿ ಮಾರ್ಗವಿರುವ ನಿಲ್ದಾಣಗಳಲ್ಲಿ ಮಾತ್ರ ವಿಧಿಸಲಾಗುತ್ತದೆ. ಇದನ್ನು ಆಯಾ ನಿಲ್ದಾಣಗಳ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ಬಳಸಲಾಗುತ್ತದೆಎಂದು ಅವರು ಹೇಳಿದರು. ಈ ವಿಷಯವು ಪರಿಶೀಲನೆಯಲ್ಲಿದೆ ಮತ್ತು ಬಳಕೆದಾರರ ಶುಲ್ಕದ ಬಗ್ಗೆ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ ಎಂದು ವಕ್ತಾರರು ಹೇಳಿದರು. "ಆದರೆ ಒಂದು ವಿಷಯ ನಿಶ್ಚಿತ, ಈ ಬಳಕೆದಾರರ ಶುಲ್ಕಗಳುತೆ ಕನಿಷ್ಠವಾಗಿರುತ್ತದೆ ಮತ್ತು ಯಾವುದೇ ವಿಭಾಗದ ಪ್ರಯಾಣಿಕರಿಗೆ ಹೊರೆಯಾಗಿರುವುದಿಲ್ಲ" ಎಂದು ಅವರು ಹೇಳಿದರು.

SCROLL FOR NEXT