ಸಾಂದರ್ಭಕ ಚಿತ್ರ 
ದೇಶ

ಭಾರತದ 4 ಲ್ಯಾಬ್‌ಗಳಿಂದ ಪಡೆದ ಕೋವಿಡ್ ನೆಗಟಿವ್ ವರದಿಗಳನ್ನು ತಿರಸ್ಕರಿಸಿ: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಗೆ ದುಬೈ ಸೂಚನೆ

ನಾಲ್ಕು ಭಾರತೀಯ ಪ್ರಯೋಗಾಲಯಗಳಿಂದ ಪ್ರಯಾಣಿಕರ ಪಡೆದ ಕೋವಿಡ್-19 ನೆಗಟಿವ್ ಪರೀಕ್ಷಾ ವರದಿಗಳನ್ನು ತಿರಸ್ಕರಿಸಬೇಕು ಎಂದು ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರ(ಡಿಸಿಎಎ) ಸೋಮವಾರ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೆ ಸೂಚಿಸಿದೆ.

ನವದೆಹಲಿ: ನಾಲ್ಕು ಭಾರತೀಯ ಪ್ರಯೋಗಾಲಯಗಳಿಂದ ಪ್ರಯಾಣಿಕರ ಪಡೆದ ಕೋವಿಡ್-19 ನೆಗಟಿವ್ ಪರೀಕ್ಷಾ ವರದಿಗಳನ್ನು ತಿರಸ್ಕರಿಸಬೇಕು ಎಂದು ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರ(ಡಿಸಿಎಎ) ಸೋಮವಾರ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೆ ಸೂಚಿಸಿದೆ.

ಜೈಪುರದ ಸೂರ್ಯ ಲ್ಯಾಬ್, ಕೇರಳದ ಮೈಕ್ರೋಹೆಲ್ತ್ ಲ್ಯಾಬ್, ಡಾ.ಪಿ.ಭಾಸಿನ್ ಪಾಥ್‌ಲ್ಯಾಬ್ಸ್(ಖಾಸಗಿ) ಲಿಮಿಟೆಡ್ ಮತ್ತು ದೆಹಲಿಯ ನೋಬಲ್ ಡಯಾಗ್ನೋಸ್ಟಿಕ್ ಸೆಂಟರ್ ನೀಡುವ ಕೋವಿಡ್-19 ವರದಿಗಳನ್ನು ತಿರಸ್ಕರಿಸಬೇಕು ಎಂದು ವಿಮಾನಯಾನ ಸಂಸ್ಥೆ ಟ್ವಿಟರ್‌ನಲ್ಲಿ ತಿಳಿಸಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯ ನಿಯಮಗಳ ಪ್ರಕಾರ, ಭಾರತದಿಂದ ಪ್ರಯಾಣಿಸುವ ಪ್ರಯಾಣಿಕರು ಪ್ರಯಾಣಕ್ಕೂ 96 ಗಂಟೆಗಳ ಮೊದಲು ಮಾಡಿದ ಆರ್ ಟಿ-ಪಿಸಿಆರ್ ನಿಂದ ಪಡೆದ ಕೋವಿಡ್ ನೆಗಟಿವ್ ಮೂಲ ಪ್ರಮಾಣಪತ್ರಗಳನ್ನು ಸಲ್ಲಿಸಬೇಕು.

ಆಗಸ್ಟ್ 18 ಮತ್ತು ಸೆಪ್ಟೆಂಬರ್ 4 ರಂದು ಕೋವಿಡ್-19 ಪಾಸಿಟಿವ್ ಪ್ರಮಾಣಪತ್ರಗಳೊಂದಿಗೆ ಇಬ್ಬರು ಪ್ರಯಾಣಿಕರನ್ನು ಕರೆತಂದಿದ್ದಕ್ಕಾಗಿ ಸೆಪ್ಟೆಂಬರ್ 18 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳನ್ನು ಡಿಸಿಎಎ 24 ಗಂಟೆಗಳ ಕಾಲ ಸ್ಥಗಿತಗೊಳಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT