ದೇಶ

ಈ ಬಾರಿ ದೇಶದಲ್ಲಿ 'ಸಾಮಾನ್ಯಕ್ಕಿಂತ ಹೆಚ್ಚಿನ' ಮಳೆ ಆಗಿದೆ: ಹವಾಮಾನ ಇಲಾಖೆ

Raghavendra Adiga

ನವದೆಹಲಿ: ನಾಲ್ಕು ತಿಂಗಳ ಮಳೆಗಾಲದಲ್ಲಿ ದೇಶವು ಸಾಮಾನ್ಯ ಮಾನ್ಸೂನ್ ಗಿಂತ ಹೆಚ್ಚಿನ ಪ್ರಮಾಣದ ಮಳೆಯನ್ನು ಕಂಡಿದೆ ಇದು ಕಳೆದ 30 ವರ್ಷಗಳಲ್ಲಿ ಎರಡನೇ ಅತಿ ಹೆಚ್ಚು ಮಳೆಯಾಗಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.

ಜೂನ್ (107 ಶೇಕಡಾ), ಆಗಸ್ಟ್ (127 ಶೇಕಡಾ) ಮತ್ತು ಸೆಪ್ಟೆಂಬರ್ (ಶೇಕಡಾ 105) - ನಾಲ್ಕು ತಿಂಗಳ ಮೂರು ಅವಧಿಯೊಂದಿಗೆ ದೇಶವು ದೀರ್ಘಾವಧಿಯ ಸರಾಸರಿ 109 ರಷ್ಟು ಮಳೆಯಾಗಿದೆ  ಆದರೆ ಜುಲೈನಲ್ಲಿ ( 90 ರಷ್ಟು) ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

"ಜೂನ್ 1 ರಿಂದ ಸೆಪ್ಟೆಂಬರ್ 30 ರ ಅವಧಿಯಲ್ಲಿ 2020 ರ ಮಾನ್ಸೂನ್ ಮಳೆಯು 1961-2010ರ ದತ್ತಾಂಶವನ್ನು ಆಧರಿಸಿ (ಸರಾಸರಿ ಶೇಕಡಾ 109) ದೀರ್ಘಾವಧಿಯ ಸರಾಸರಿ 87.7 ಸೆಂ.ಮೀ.ಗೆ ಹೋಲಿಸಿದರೆ 95.4 ಸೆಂಟಿಮೀಟರ್ ಮಳೆ ಆಗಿದೆ"  ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರ  ವಿಜ್ಞಾನಿ ಆರ್.ಕೆ.ಜೆನಮಣಿ ಹೇಳಿದ್ದಾರೆ. ಭಾರತದಲ್ಲಿ ಮಳೆಗಾಲ ಅಧಿಕೃತವಾಗಿ ಜೂನ್ 1 ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 30 ರವರೆಗೆ ಇರುತ್ತದೆ.

ನೈಋತ್ಯ ಮಾನ್ಸೂನ್ ದೇಶದ ವಾರ್ಷಿಕ ಮಳೆಯ ಶೇಕಡಾ 70 ರಷ್ಟನ್ನು ನೀಡುತ್ತದೆ, ಇದು ಭಾರತದ ಜಿಡಿಪಿಯ ಶೇಕಡಾ 14 ರಷ್ಟನ್ನು ಹೊಂದಿರುವ ಕೃಷಿ ಕ್ಷೇತ್ರಕ್ಕೆ ನಿರ್ಣಾಯಕವಾಗಿದೆ  ಕೃಷಿ ಮಂತ್ರಾಲಯದ ಅಂಕಿಅಂಶಗಳ ಪ್ರಕಾರ, ಒಂದು ವರ್ಷದ ಹಿಂದೆ 1,066.06 ಲಕ್ಷ ಹೆಕ್ಟೇರ್ ಗೆ ಹೋಲಿಸಿದರೆ ರೈತರು ಕಳೆದ ವಾರದವರೆಗೆ 1,116.88 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಖಾರಿಫ್ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ.

ಈ ವರ್ಷ ಹತ್ತೊಂಬತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಾಮಾನ್ಯ ಮಳೆಯಾಗಿದ್ದರೆ, ಒಂಬತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಬಿಹಾರ, ಗುಜರಾತ್, ಮೇಘಾಲಯ, ಗೋವಾ, ಆಂಧ್ರಪ್ರದೇಶ ತೆಲಂಗಾಣ, ತಮಿಳುನಾಡು, ಕರ್ನಾಟಕ ಮತ್ತು ಲಕ್ಷದ್ವೀಪ ದ್ವೀಪಗಳು ಸಾಮಾನ್ಯ ಮಳೆಗಿಂತ ಹೆಚ್ಚು ಮಳೆ ಕಂಡಿದೆ. ಸಿಕ್ಕಿಂನಲ್ಲಿ ಹೆಚ್ಚಿನ ಮಳೆಯಾಗಿದೆ.

ಆದರೆ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದಲ್ಲಿ ಮಳೆ ಕೊರತೆ ಇದೆ. ಲಡಾಖ್ ದೊಡ್ಡ ಪ್ರಮಾಣದ ಮಳೆ ಕೊರತೆಯನ್ನು ದಾಖಲಿಸಿದೆ.
 

SCROLL FOR NEXT