ದೇಶ

ಕೋವಿಡ್-19: ದೇಶಾದ್ಯಂತ 24 ಗಂಟೆಗಳಲ್ಲಿ 80,472 ಕೇಸ್ ಪತ್ತೆ, 1,179 ಮಂದಿ ಸಾವು

Manjula VN

ನವದೆಹಲಿ: ಕೊರೋನಾ ದೇಶದಲ್ಲಿ ಇನ್ನೂ ತುತ್ತ ತುದಿಗೆ ತಲುಪಿಲ್ಲ ಎಂಬ ಸಂಶೋಧಕರ ವಾದಗಳ ನಡುವೆಯೇ, ಈ ವೈರಸ್ ತನ್ನ ಗರಿಷ್ಠ ಮಟ್ಟ ತಲುಪಿ ಇಳಿಮುಖವಾಗುತ್ತಿದೆಯೇ ಎಂಬ ಅನುಮಾನಗಳು ಮೂಡತೊಡಗಿದೆ. ದೇಶದಲ್ಲಿ ಕಳೆದ 10 ದಿನಗಳಿಂದ ಕೊರೋನಾ ಸೋಂಕಿತರ ಹಾಗೂ ಸಾವಿನ ಸಂಖ್ಯೆ ಇಳಿಕೆಯಾಗುತ್ತಿರುವುದೇ ಇದಕ್ಕೆ ಕಾರಣವಾಗಿದೆ. 

ಸೆ.17ರಂದು ದೇಶದಲ್ಲಿ 93,199 ಕೊರೋನಾ ಸೋಂಕಿತರು ಪತ್ತೆಯಾಗಿದ್ದರು. ಆನಂತರ ಸತತ 10 ದಿನಗಳ ಕಾಲ ಈ ಸಂಖ್ಯೆ ಭಾರೀ ಕಡಿಮೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲ ಸಿದ್ಧಪಡಿಸಿರುವ ಬುಧವಾರ ಬೆಳಿಗ್ಗೆ 8ರವರೆಗಿನ ಅಂಕಿ-ಸಂಖ್ಯೆಗಳ ಪ್ರಕಾರ ದೇಶದಲ್ಲಿ 24 ಗಂಟೆಗಳಲ್ಲಿ 80,472 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಅಲ್ಲದೆ, 1,179 ಮಂದಿ ಸಾವಿಗೀಡಾಗಿದ್ದಾರೆ. ಸುದೀರ್ಘವಾಗಿ ಅವಧಿಗೆ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವುದು ದೇಶದಲ್ಲಿ ಇದೇ ಮೊದಲಾಗಿದೆ. 

ಪ್ರಸ್ತುತ ದೇಶದಲ್ಲಿ ಒಟ್ಟಾರೆ 62,25,764 ಮಂದಿಗೆ ಸೊಂಕು ತಗುಲಿದ್ದು, ಸಾವಿನ ಸಂಖ್ಯೆ 97,497ಕ್ಕೆ ಏರಿಕೆಯಾಗಿದೆ. ಇನ್ನು ಚೇತರಿಕೆ ಪ್ರಮಾಣ 51,87,826ಕ್ಕೆ ಏರಿಕೆಯಾಗಿದ್ದು, ದೇಶದಲ್ಲಿನ್ನೂ 9,40,441 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಕೊರೋನಾ ಪರೀಕ್ಷೆ ಸಂಖ್ಯೆ ಕಡಿಮೆಯಿದ್ದಾಗ ಅಧಿಕ ಪ್ರಮಾಣದಲ್ಲಿ ಸೋಂಕು ಕಂಡು ಬರುತ್ತಿದ್ದರು. ಸೆ.17ರಂದು 93ಸಾವಿರ ಸೋಂಕಿತರು ಪತ್ತೆಯಾದ ದಿನ 10.7ಲಕ್ಷ ಪರೀಕ್ಷೆಗಳು ನಡೆದರೆ ಈಗ 11.2 ಲಕ್ಷಕ್ಕೂ ಅಧಿಕ ಪರೀಕ್ಷೆಗಳು ನ ಡೆಯುತ್ತಿವೆ. ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. 

ದೇಶಾದ್ಯಂತ 24 ಗಂಟೆಗಳಲ್ಲಿ 10,86,688 ಕೋವಿಡ್ ಪರೀಕ್ಷೆ, ಒಟ್ಟಾರೆ 7.41  ಕೋಟಿ ಸ್ಯಾಂಪಲ್ ಪರೀಕ್ಷೆ: ಐಸಿಎಂಆರ್

ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವಂತೆಯೇ ಇತ್ತ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ 24 ಗಂಟೆಗಳಲ್ಲಿ ದೇಶಾದ್ಯಂತ  10,86,688 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ. 

ಈ ಬಗ್ಗೆ ಐಸಿಎಂಆರ್ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 10,86,688 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದ್ದು, ಆ ಮೂಲಕ ದೇಶದಲ್ಲಿ ಈ ವರೆಗೂ ಅಂದರೆ ಸೆ.29 ರವರೆಗೂ 7,41,96,729 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ.

SCROLL FOR NEXT