ದೇಶ

18 ವರ್ಷ ಮೇಲ್ಪಟ್ಟ ವಯಸ್ಸಿನವರಿಗೂ ಲಸಿಕೆ ನೀಡಲು ಪ್ರಧಾನಿಗೆ ಐಎಂಎ ಒತ್ತಾಯ!

Srinivas Rao BV

ನವದೆಹಲಿ: ದೇಶಾದ್ಯಂತ ಕೋವಿಡ್-19 ಸೋಂಕು ಹರಡುವಿಕೆಯ ಎರಡನೇ ಅಲೆ ವ್ಯಾಪವಾಗಿದ್ದು, 18 ರ ಮೇಲ್ಪಟ್ಟ ವಯಸ್ಸಿನವರಿಗೂ ಲಸಿಕೆ ತೆಗೆದುಕೊಳ್ಳುವುದಕ್ಕೆ ಅನುಮತಿ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ) ಪತ್ರ ಬರೆದು ಮನವಿ ಮಾಡಿದೆ.

ಏ.06 ರಂದು ಐಎಂಎ ಪತ್ರ ಬರೆದಿದ್ದು, 45 ವರ್ಷಗಳ ಮೇಲ್ಪಟ್ಟ ಎಲ್ಲರಿಗೂ ಈಗ ಲಸಿಕೆ ಹಾಕಿಸಲಾಗುತ್ತಿದೆ. ಈಗ ಎರಡನೇ ಅಲೆಯಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಆದ್ದರಿಂದ ನಮ್ಮ ಲಸಿಕೆ ಕಾರ್ಯತಂತ್ರವನ್ನು ಸಮರೋಪಾದಿಯಲ್ಲಿ ಕೊಗೊಳ್ಳಬೇಕಿದೆ, ಆದ್ದರಿಂದ 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಕೋವಿಡ್-19 ಲಸಿಕೆಯನ್ನು ತೆಗೆದುಕೊಳ್ಳುವುದಕ್ಕೆ ಅನುಮತಿ ನೀಡಬೇಕೆಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಐಎಂಎ ಹೇಳಿದೆ.

ಇದೇ ವೇಳೆ ಖಾಸಗಿ ಕ್ಷೇತ್ರದ ಕುಟುಂಬ ಕ್ಲಿನಿಕ್ ಗಳನ್ನೂ ಲಸಿಕೆ ಅಭಿಯಾನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಐಎಂಎ ಸಲಹೆ ನೀಡಿದೆ. ಇನ್ನು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ಪಡೆಯುವುದಕ್ಕೆ ಲಸಿಕೆ ಪ್ರಮಾಣಪತ್ರಗಳನ್ನು ತೆಗೆದುಕೊಂಡು ಹೋಗುವುದನ್ನು ಕಡ್ಡಾಯಗೊಳಿಸಬೇಕೆಂದೂ ಐಎಂಎ ಹೇಳಿದೆ.

SCROLL FOR NEXT