ದೇಶ

ದೆಹಲಿ ಏಮ್ಸ್ ನ 20 ವೈದ್ಯರು, 6 ವಿದ್ಯಾರ್ಥಿಗಳಿಗೆ ಕೊರೋನಾ

Raghavendra Adiga

ನವದೆಹಲಿ: ನವದೆಹಲಿಯ ಏಮ್ಸ್ ನ ಇಪ್ಪತ್ತು ವೈದ್ಯರು ಮತ್ತು ಆರು ವೈದ್ಯಕೀಯ ವಿದ್ಯಾರ್ಥಿಗಳು ಕಳೆದ 10 ದಿನಗಳಲ್ಲಿ ಕೋವಿಡ್-19 ಸೋಂಕಿಗೆ ಒಳಗಾಗಿದ್ದಾರೆ. ಇದರಲ್ಲಿ ಇಬ್ಬರು ಇದಾಗಲೇ ಕೊರೋನಾ ಲಸಿಕೆ ತೆಗೆದುಕೊಂಡಿದ್ದಾರೆಎಂದು ಅಧಿಕೃತ ಮೂಲಗಳು ತಿಳಿಸಿವೆ.

20 ವೈದ್ಯರಲ್ಲಿ ಇಬ್ಬರು ಅಧ್ಯಾಪಕರು ಸೇರಿದ್ದಾರೆ. ಉಳಿದವರು ಸ್ಥಳೀಯ ನಿವಾಸಿಗಳೆಂದು ಮೂಲವೊಂದು ತಿಳಿಸಿದೆ. ಇವರಲ್ಲಿ ಬಹುಪಾಲು ವೈದ್ಯರಿಗೆ ಕೋವಿಡ್ ನ ಸೌಮ್ಯವಾದ ಲಕ್ಷಣಗಳು ಕಂಡುಬಂದಿದೆ. ಕೆಲವು ಪ್ರಕ್ರಿಯೆಗಳು ಇನ್ನೂ ಇದ್ದರೂ ಅವುಗಳಲ್ಲಿ ಹೆಚ್ಚಿನವರ ಸಂಪರ್ಕಗಳನ್ನು ಕಂಡುಹಿಡಿಯಲಾಗಿದೆ ನವದೆಹಲಿಯ ಏಮ್ಸ್ ನಲ್ಲಿ ಸ್ಥಳೀಯ ವೈದ್ಯರು ಹಾಗೂ ಅಧ್ಯಾಪಕ ಸದಸ್ಯರು ಸೇರಿದಂತೆ 3,000 ಕ್ಕೂ ಹೆಚ್ಚು ವೈದ್ಯರಿದ್ದಾರೆ. ಕೋವಿಡ್ 19 ಪ್ರಕರಣಗಳಲ್ಲಿ ಇತ್ತೀಚಿನ ಏರಿಕೆ ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೂ ಸಹ ತಟ್ಟಿದೆ.

ಕಳೆದ ಕೆಲವು ವಾರಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಕೊರೋನಾವೈರಸ್ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ ಮತ್ತು ದೈನಂದಿನ ಪ್ರಕರಣಗಳ ಎಣಿಕೆ ಈ ವರ್ಷ ಮೊದಲ ಬಾರಿಗೆ 7,000ದ ಗಡಿ ದಾಟಿದೆ.

SCROLL FOR NEXT