ದೇಶ

ಪಶ್ಚಿಮ ಬಂಗಾಳ ಚುನಾವಣೆ: ಸಿಟಾಲ್ಕುಚಿ ಮತಗಟ್ಟೆ ಬಳಿ ಗುಂಡಿನ ದಾಳಿ, ಮೊದಲ ಬಾರಿ ಮತ ಹಾಕಲು ಬಂದ ವ್ಯಕ್ತಿ ಸಾವು!

ನಾಲ್ಕನೇ ಹಂತದ ಮತದಾನ ನಡೆಯುತ್ತಿರುವ ಪಶ್ಚಿಮ ಬಂಗಾಳ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಶನಿವಾರ ಅಹಿತಕರ ಘಟನೆ ನಡೆದಿದೆ.

ಕೋಲ್ಕತ್ತಾ: ನಾಲ್ಕನೇ ಹಂತದ ಮತದಾನ ನಡೆಯುತ್ತಿರುವ ಪಶ್ಚಿಮ ಬಂಗಾಳ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಶನಿವಾರ ಅಹಿತಕರ ಘಟನೆ ನಡೆದಿದೆ.

ಉತ್ತರ ಬಂಗಾಳದ ಕೂಚ್ ಬೆಹಾರ್ ನ ಸಿಟಾಲ್ಕುಚಿ ಮತಗಟ್ಟೆಯ ಮುಂದೆ ಟಿಎಂಸಿ ಬೆಂಬಲಿಗರು ಗುಂಡಿನ ದಾಳಿ ನಡೆಸಲಾರಂಭಿಸಿದರು. ಅದರಲ್ಲಿ ಮೊದಲ ಬಾರಿ ಮತದಾನ ಮಾಡಲು ಬಂದ 18 ವರ್ಷದ ಆನಂದ ಬರ್ಮನ್ ಬಲಿಯಾಗಿದ್ದಾರೆ.

ಇದಕ್ಕೆ ಮುನ್ನ ಮೂರು ಹಂತದ ಮತದಾನ ವೇಳೆ ಕೂಡ ಪಶ್ಚಿಮ ಬಂಗಾಳದಲ್ಲಿ ಅಲ್ಲಲ್ಲಿ ಗಲಭೆ, ಹಿಂಸಾಚಾರ ನಡೆದಿತ್ತು. ಆದರೆ ಈ ಬಾರಿ ಹತ್ಯೆ ಸಂಭವಿಸಿದೆ.

ಲೊಕೆಟ್ ಚಟರ್ಜಿ ಆರೋಪ: ಇನ್ನು ಹೂಗ್ಲಿಯ ಮತಗಟ್ಟೆ ಸಂಖ್ಯೆ 66ರಲ್ಲಿ ತಮ್ಮ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ ಎಂದು ಚುನಾವಣಾ ಆಯೋಗದ ಅಧಿಕಾರಿಗೆ ದೂರವಾಣಿ ಮೂಲಕ ಬಿಜೆಪಿ ನಾಯಕಿ ಲೊಕೆಟ್ ಚಟರ್ಜಿ ಆರೋಪಿಸಿದ್ದಾರೆ. ಪತ್ರಕರ್ತರು ಕೂಡ ತಮ್ಮ ಮೇಲೆ ಹಲ್ಲೆ ಮಾಡಿದ್ದು ಭದ್ರತೆಗೆ ಹೆಚ್ಚುವರಿ ಸಿಬ್ಬಂದಿಯನ್ನು ಕಳುಹಿಸಿಕೊಡುವಂತೆ ಕೋರಿದ್ದಾರೆ.

ಚುನಾವಣೆಗೆ ಸಂಬಂಧಪಟ್ಟ ವರದಿ ಮಾಡುತ್ತಿದ್ದ ಮಾಧ್ಯಮಗಳ ವಾಹನಗಳ ಮೇಲೆ ಹೂಗ್ಲಿಯಲ್ಲಿ ದಾಳಿ ನಡೆದಿದೆ.  ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನದಲ್ಲಿ 11 ಗಂಟೆ 5 ನಿಮಿಷ ವೇಳೆಗೆ ಶೇಕಡಾ 16.65ರಷ್ಟು ಮತದಾನವಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ. ಬೆಲೆಬಾಳುವ 17 ಅಂತಸ್ತಿನ ಕಟ್ಟಡ 'Abode ಇಡಿ ವಶಕ್ಕೆ!

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

SCROLL FOR NEXT