ದೇಶ

ಉತ್ತರ ಪ್ರದೇಶದಲ್ಲಿ ಗ್ರಾಮ ಪಂಚಾಯತ್ ಚುನಾವಣೆ: ಅಭ್ಯರ್ಥಿ ಮನೆಯಿಂದ ಎರಡು ಕ್ವಿಂಟಾಲ್ ಜಿಲೇಬಿ, 1,050 ಸಮೋಸ ವಶ

Sumana Upadhyaya

ಉನ್ನಾವೊ(ಉತ್ತರ ಪ್ರದೇಶ): ಇಲ್ಲಿನ ಹಸಂಗಂಜ್ ನಲ್ಲಿ ಗ್ರಾಮ ಪಂಚಾಯತ್ ಚುನಾವಣಾ ಅಭ್ಯರ್ಥಿ ಮತದಾರರಿಗೆ ಹಂಚಲು ತಂದಿದ್ದ ಎರಡು ಕ್ವಿಂಟಾಲ್ ಜಿಲೇಬಿ ಮತ್ತು 1,050 ಸಮೋಸವನ್ನು ಉನ್ನಾವೊ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೋವಿಡ್ ನಿಯಮ ಮತ್ತು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಕೇಸು ದಾಖಲಿಸಲಾಗಿದೆ. 10 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿ ಸಿಕ್ಕಿದ ತಕ್ಷಣ ಪೊಲೀಸರು, ಅಭ್ಯರ್ಥಿಯ ನಿವಾಸದ ಮೇಲೆ ದಾಳಿ ನಡೆಸಿ ಎಲ್ ಪಿಜಿ ಸಿಲೆಂಡರ್, ಜಿಲೇಬಿ ಮತ್ತು ಸಮೋಸ ತಯಾರಿಸಲು ಸಿದ್ಧಪಡಿಸಿದ್ದ ಅಡುಗೆ ಪದಾರ್ಥಗಳನ್ನು ವಶಪಡಿಸಿಕೊಂಡರು.

ಉತ್ತರ ಪ್ರದೇಶದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಾಲ್ಕು ಹಂತಗಳಲ್ಲಿ ಏಪ್ರಿಲ್ 15ರಿಂದ ಆರಂಭವಾಗುತ್ತದೆ. ಅಂತಿಮ ಹಂತ ಏಪ್ರಿಲ್ 29ರಂದು ನಡೆಯಲಿದ್ದು ಫಲಿತಾಂಶ ಮೇ 2ರಂದು ಪ್ರಕಟವಾಗಲಿದೆ.

SCROLL FOR NEXT