ದೇಶ

ಕೊರೋನಾಗೆ ಬಂತು ಮೂರನೇ ಲಸಿಕೆ: ಭಾರತದಲ್ಲಿ ರಷ್ಯಾದ ಸ್ಪುಟ್ನಿಕ್-ವಿ ತುರ್ತು ಬಳಕೆಗೆ ಅನುಮತಿ

Raghavendra Adiga

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ, ರಷ್ಯಾ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್ ವಿ ಕೋವಿಡ್-19 ಲಸಿಕೆಗೆ ಭಾರತದಲ್ಲಿ ತುರ್ತು ಬಳಕೆಗಾಗಿ ಅನುಮತಿ ದೊರಕಿದೆ.

ಇದನ್ನು ಡಾ. ರೆಡ್ಡೀಸ್ ಸಂಸ್ಥೆ ಭಾರತದಲ್ಲಿ ಉತ್ಪಾದನೆ, ಪೂರೈಕೆ ನಿಗಾ ವಹಿಸಲಿದೆ.

"ಸ್ಪುಟ್ನಿಕ್ ವಿ ಗೆ ತುರ್ತು ಬಳಕೆಯ ಪರವಾನಗಿಗಾಗಿ ಡಾ. ರೆಡ್ಡೀಸ್ ಅರ್ಜಿಯನ್ನು ವಿಷಯ ತಜ್ಞರ ಸಮಿತಿ ಅನುಮೋದಿಸಿದೆ" ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭಾರತದಲ್ಲಿ ಇದೀಗ ಕೊರೋನಾ ಎರಡನೇ ಅಲೆ ಅಬ್ಬರ ಹೆಚ್ಚಿದ್ದು ಲಸಿಕೆ ಕೊರತೆಯನ್ನು ಎದುರಿಸುತ್ತಿರುವ ಕಾರಣ, ದೇಶದ ಔಷಧ  ನಿಯಂತ್ರಕದ ತಜ್ಞರ ಸಮಿತಿ ಈ ತೀರ್ಮಾನ ತೆಗೆದುಕೊಂಡಿದೆ ಎನ್ನಲಾಗಿದೆ.

ಭಾರತವು ತನ್ನ ಮೆಗಾ ಕೋವಿಡ್ -19 ವ್ಯಾಕ್ಸಿನೇಷನ್ ಡ್ರೈವ್‌ನ ಮೂರನೇ ಹಂತದಲ್ಲಿದೆ, ಇದು 2021 ರ ಜನವರಿ 16 ರಂದು ಪ್ರಾರಂಭವಾಯಿತು.
 

SCROLL FOR NEXT