ದೇಶ

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯ ಹೆಚ್ಚಳ: 1,68,912 ಹೊಸ ಕೇಸು ಪತ್ತೆ, 904 ಮಂದಿ ಸಾವು

Sumana Upadhyaya

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಎರಡನೇ ಅಲೆ ಬಂದ ನಂತರ ಹೆಚ್ಚಾಗುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಕಠಿಣವಾಗುತ್ತಿದೆ. ಕಳೆದ 24 ಗಂಟೆಯಲ್ಲಿ 1 ಲಕ್ಷದ 68 ಸಾವಿರದ 912 ಸೋಂಕಿತರು ಪತ್ತೆಯಾಗಿದ್ದಾರೆ.

ನಿನ್ನೆ ಒಂದೇ ದಿನ 904 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಇದುವರೆಗೆ ಮೃತಪಟ್ಟವರ ಸಂಖ್ಯೆ 1,70,179ಕ್ಕೆ ಏರಿಕೆಯಾಗಿದೆ. ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 12 ಲಕ್ಷದ 01 ಸಾವಿರದ 009ಕ್ಕೆ ಏರಿಕೆಯಾಗಿದೆ.

ಒಂದೇ ದಿನ 1,68,912 ಮಂದಿಯಲ್ಲಿ ಸೋಂಕು ಪತ್ತೆಯಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,35,27,717ಕ್ಕೆ ತಲುಪಿದೆ.

ಈ ನಡುವೆ ಕಳೆದ 24 ಗಂಟೆಗಳಲ್ಲಿ 75 ಸಾವಿರದ 086 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ 1 ಕೋಟಿಯ 21 ಲಕ್ಷದ 56 ಸಾವಿರದ 529 ಕ್ಕೆ ತಲುಪಿದೆ.

904 ಹೊಸ ಸಾವು ಪ್ರಕರಣದಲ್ಲಿ ಮಹಾರಾಷ್ಟ್ರದಲ್ಲಿ 349, ಛತ್ತೀಸ್ ಗಢದಲ್ಲಿ 122, ಉತ್ತರಪ್ರದೇಶದಲ್ಲಿ 67, ಪಂಜಾಬ್‌ನಲ್ಲಿ 59, ಗುಜರಾತ್‌ ನಲ್ಲಿ 54, ದೆಹಲಿಯಿಂದ 48, ಕರ್ನಾಟಕದಿಂದ 40, ಮಧ್ಯಪ್ರದೇಶದಿಂದ 24, ತಮಿಳುನಾಡಿನಿಂದ 22, ಜಾರ್ಖಂಡ್‌ನಿಂದ 21, ತಲಾ 16 ಕೇರಳ ಮತ್ತು ಹರಿಯಾಣ ಮತ್ತು ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಿಂದ ತಲಾ 10 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. 

ದೇಶದಲ್ಲಿ ಈವರೆಗೆ ಒಟ್ಟು 1,70,179 ಸಾವುಗಳು ಸಂಭವಿಸಿವೆ. ಮಹಾರಾಷ್ಟ್ರದಲ್ಲಿ 57,987, ತಮಿಳುನಾಡಿನಲ್ಲಿ 12,908, ಕರ್ನಾಟಕದಲ್ಲಿ 12,889, ದೆಹಲಿಯಲ್ಲಿ 11,283, ಪಶ್ಚಿಮ ಬಂಗಾಳದಲ್ಲಿ 10,400, ಉತ್ತರ ಪ್ರದೇಶದಲ್ಲಿ 9,152, ಪಂಜಾಬ್‌ನಲ್ಲಿ 7,507 ಮತ್ತು ಆಂಧ್ರದಲ್ಲಿ 7,300 ಮಂದಿ ಕೊರೋನಾಕ್ಕೆ ಬಲಿಯಾಗಿದ್ದಾರೆ.  
ಇನ್ನು ಭಾರತದಲ್ಲಿ ನಿನ್ನೆ ಒಂದೇ ದಿನ 11 ಲಕ್ಷದ 80 ಸಾವಿರದ 136 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ ದೇಶದಲ್ಲಿ 25 ಲಕ್ಷದ 78 ಸಾವಿರದ 06 ಸಾವಿರದ 986 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

10.45 ಕೋಟಿಗೂ ಅಧಿಕ ಕೋವಿಡ್ ಲಸಿಕೆ ಡೋಸ್: ದೇಶದಲ್ಲಿ ಇದುವರೆಗೆ 10.45 ಕೋಟಿಗೂ ಅಧಿಕ ಕೊರೋನಾ ಲಸಿಕೆ ಡೋಸ್ ನ್ನು ಹಾಕಲಾಗಿದೆ, ನಿನ್ನೆ ಲಸಿಕೆ ಉತ್ಸವದ ಮೊದಲ ದಿನ ಸುಮಾರು 30 ಲಕ್ಷ ಡೋಸ್ ನ್ನು ನೀಡಲಾಗಿದೆ. ಭಾರತದಲ್ಲಿ ಪ್ರತಿದಿನ ಸರಾಸರಿ 40 ಲಕ್ಷ ಕೊರೋನಾ ಡೋಸ್ ನ್ನು ನೀಡಲಾಗುತ್ತಿದ್ದು ಜಗತ್ತಿನಲ್ಲಿಯೇ ಅಧಿಕವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
 

SCROLL FOR NEXT