ದೇಶ

'ಲಸಿಕಾ ಉತ್ಸವ' ಒಂದು ಪ್ರಹಸನ: ಪ್ರಧಾನಿ ಮೋದಿ ವಿರುದ್ಧ ರಾಹುಲ್‌ ಟೀಕೆ

Vishwanath S

ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಸಾಂಕ್ರಾಮಿಕ ರೋಗದ ನಿರ್ವಹಣೆಯನ್ನು ಖಂಡಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ದೇಶಾದ್ಯಂತ ನಿನ್ನೆಯವರೆಗೆ ನಡೆದ 'ಲಸಿಕಾ ಉತ್ಸವ'ವನ್ನು ಒಂದು 'ಪ್ರಹಸನ' ಎಂದು ಟೀಕಿಸಿದ್ದಾರೆ.

'ಯಾವುದೇ ಪರೀಕ್ಷೆಗಳಿಲ್ಲ, ಆಸ್ಪತ್ರೆಯಲ್ಲಿ ಹಾಸಿಗೆಗಳಿಲ್ಲ, ವೆಂಟಿಲೇಟರ್ ಇಲ್ಲ, ಆಮ್ಲಜನಕವಿಲ್ಲ. ಲಸಿಕೆ ಕೂಡ ಇಲ್ಲ. ಕೇವಲ ಉತ್ಸವದ ಸೋಗು' ಎಂದು ರಾಹುಲ್‌ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಕೋವಿಡ್‌ ಪ್ರಕರಣಗಳ ಹೆಚ್ಚಳದ ಮಧ್ಯೆ ಲಸಿಕೆಗಳ ಕೊರತೆ ಬಹಳ ಗಂಭೀರ ವಿಷಯವಾಗಿದೆ. ಅದು ಯಾವುದೇ 'ಉತ್ಸವ' ಅಲ್ಲ ಎಂದಿದ್ದಾರೆ.

ಈ ಹಿಂದೆಯೇ ಲಸಿಕೆಗಳನ್ನು ರಫ್ತು ಮಾಡುವ ಕುರಿತು ಟೀಕಿಸಿದ್ದ ರಾಹುಲ್‌, ಜನರ ಆರೋಗ್ಯದ ವೆಚ್ಚದಲ್ಲಿ 'ಪ್ರಚಾರ' ಗಳಿಸುವ ತಂತ್ರ ಎಂದಿದ್ದರು. ಈಗ ಕೋವಿಡ್-19 ಪ್ರಕರಣಗಳಲ್ಲಿ ಆತಂಕಕಾರಿಯಾದ ಏರಿಕೆ ಮತ್ತು ಲಸಿಕೆಗಳ ತೀವ್ರ ಕೊರತೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ಹೊರ ದೇಶಗಳ ಲಸಿಕೆಗಳಿಗೆ ತ್ವರಿತಗತಿಯಲ್ಲಿ ಅನುಮೋದನೆ ನೀಡಿದೆ. 

ಇಲ್ಲಿಯವರೆಗೆ, ಈ ರೋಗವು 1,73,123 ಜನರನ್ನು ಬಲಿ ತೆಗೆದುಕೊಂಡಿದೆ. ಸಾಧ್ಯವಾದಷ್ಟು ಜನರನ್ನು ಚುಚ್ಚುಮದ್ದು ಮಾಡಲು ಏ.11 ರಿಂದ 14ರವರೆಗೆ ಸರ್ಕಾರ ಲಸಿಕೆ ಉತ್ಸವ ಆಯೋಜಿಸಿತ್ತು.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಭಾರತ ಕಳೆದ 24 ಗಂಟೆಗಳಲ್ಲಿ 2,00,739 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ.

SCROLL FOR NEXT