ದೇಶ

ಕೊರೋನಾ ನಿಯಂತ್ರಿಸಲು ಗುಜರಾತ್‌ನಲ್ಲಿ ಲಾಕ್‌ಡೌನ್ ಜಾರಿ ಮಾಡಿ: ಹೈಕೋರ್ಟ್‌ಗೆ ಐಎಂಎ ಸಲಹೆ

Lingaraj Badiger

ಅಹಮದಾಬಾದ್: ಕೊರೋನಾ ವೈರಸ್ ಹರಡುವುದನ್ನು ತಡೆಯಲು ಗುಜರಾತ್ ಸರ್ಕಾರ ರಾಜ್ಯದಲ್ಲಿ ಎರಡು ವಾರಗಳ ಲಾಕ್ ಡೌನ್ ವಿಧಿಸಬೇಕು ಎಂದು ನಿರ್ದೇಶಿಸುವಂತೆ ಐಎಂಎ ರಾಜ್ಯ ಘಟಕ ಮಂಗಳವಾರ ಗುಜರಾತ್ ಹೈಕೋರ್ಟ್‌ಗೆ ಸಲಹೆ ನೀಡಿದೆ.

ರಾಜ್ಯ ಸರ್ಕಾರ ಲಾಕ್ ಡೌನ್ ಪರವಾಗಿಲ್ಲದಿದ್ದರೆ, ಜನ ಸಂಚಾರವನ್ನು ನಿಯಂತ್ರಿಸಲು ವಿವಿಧ ಚಟುವಟಿಕೆಗಳನ್ನು ನಿರ್ಬಂಧಿಸುವ ಬಗ್ಗೆ ಯೋಚಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ(ಐಎಂಎ) ಗುಜರಾತ್ ಘಟಕದ ಅಧ್ಯಕ್ಷ ಡಾ.ದೇವೇಂದ್ರ ಪಟೇಲ್ ಅವರು ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಪಿಐಎಲ್‌ನಲ್ಲಿ ಆನ್‌ಲೈನ್ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಭಾರ್ಗವ್ ಕರಿಯಾ ಅವರ ವಿಭಾಗೀಯ ನ್ಯಾಯಪೀಠಕ್ಕೆ ಡಾ.ದೇವೇಂದ್ರ ಪಟೇಲ್ ಅವರು ತಮ್ಮ ಸಲಹೆ ನೀಡಿದ್ದಾರೆ.

ವೈದ್ಯರ ಪರವಾಗಿ ತಮ್ಮ ಅಭಿಪ್ರಾಯ ತಿಳಿಸುವಂತೆ ಹೈಕೋರ್ಟ್ ಪಟೇಲ್ ಅವರನ್ನು ಆಹ್ವಾನಿಸಿತ್ತು.

"ರಾಜ್ಯ ಸರ್ಕಾರವು ಎಲ್ಲಾ ರೀತಿಯ ಕೂಟಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು, ಅದು ಸಾಮಾಜಿಕ, ರಾಜಕೀಯ ಅಥವಾ ಧಾರ್ಮಿಕವಾಗಲಿ. ಸಾಧ್ಯವಾದರೆ, ಸರ್ಕಾರ 14 ದಿನಗಳವರೆಗೆ ಸಂಪೂರ್ಣ ಲಾಕ್‌ಡೌನ್ ವಿಧಿಸಬೇಕು. ಅದು ಸಾಧ್ಯವಾಗದಿದ್ದರೆ, ಎಲ್ಲಾ ಚಟುವಟಿಕೆಗಳ ಮೇಲೆ ತೀವ್ರ ನಿರ್ಬಂಧ ಹೇರಬೇಕು" ಎಂದು ಪಟೇಲ್ ಅವರು ಹೈಕೋರ್ಟ್ ಗೆ ತಿಳಿಸಿದ್ದಾರೆ.

SCROLL FOR NEXT