ಸಾಂದರ್ಭಿಕ ಚಿತ್ರ 
ದೇಶ

ಕೋವಿಡ್-19 ಹೆಚ್ಚಳ: ಯುಜಿಸಿ- ಎನ್ಇಟಿ ಪರೀಕ್ಷೆ ಮುಂದೂಡಿಕೆ

ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಮೇ 2ರಿಂದ 17ಕ್ಕೆ ನಡೆಯಬೇಕಿದ್ದ ಯುಜಿಸಿ- ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್ ಮಂಗಳವಾರ ಪ್ರಕಟಿಸಿದ್ದಾರೆ.

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಮೇ 2ರಿಂದ 17ಕ್ಕೆ ನಡೆಯಬೇಕಿದ್ದ ಯುಜಿಸಿ- ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್ ಮಂಗಳವಾರ ಪ್ರಕಟಿಸಿದ್ದಾರೆ.

ಪರಿಷ್ಕೃತ ಪರೀಕ್ಷಾ ದಿನಾಂಕವನ್ನು ತದನಂತರ ಪ್ರಕಟಿಸಲಾಗುವುದು, ಪರೀಕ್ಷೆಗಿಂತ ಕನಿಷ್ಠ  15 ದಿನ ಮುಂಚಿತವಾಗಿ ವಿಷಯ ತಿಳಿಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಆದೇಶದಲ್ಲಿ ತಿಳಿಸಿದೆ. 

ಅಭ್ಯರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಯುಜಿಸಿ- ನೆಟ್ ಪರೀಕ್ಷೆಯನ್ನು ಮುಂದೂಡುವಂತೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ಸಲಹೆ ನೀಡಿದ್ದಾಗಿ ನಿಶಾಂಕ್ ಟ್ವೀಟ್ ಮಾಡಿದ್ದಾರೆ.

ಪ್ರಸ್ತುತದಲ್ಲಿನ ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿ ಹಾಗೂ ಅಭ್ಯರ್ಥಿಗಳ ಆರೋಗ್ಯ, ಸುರಕ್ಷತೆಯನ್ನು ನೋಡಿಕೊಂಡು, ಯುಜಿಸಿ-ನೆಟ್ ಪರೀಕ್ಷೆಯನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಆದೇಶದಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಸಿಎಂ ಬದಲಾವಣೆಯಾದ್ರೆ ಜನರಿಗೆ ಕಾರಣ ತಿಳಿಸಬೇಕು, ಇಲ್ಲ ಪರಿಣಾಮ ಎದುರಿಸಬೇಕಾಗುತ್ತದೆ: ಕಾಂಗ್ರೆಸ್ ಗೆ 'ಅಹಿಂದ' ಎಚ್ಚರಿಕೆ

ಮಮತಾಗೆ ಬಿಗ್ ಶಾಕ್; TMC ವಿಭಜನೆ? ತೃಣಮೂಲ ಕಾಂಗ್ರೆಸ್ ನ 50 ಶಾಸಕರು, 20 ಸಂಸದರು ಬಿಜೆಪಿ ಸೇರ್ಪಡೆ?

KPCCಗೆ ಮೇಜರ್ ಸರ್ಜರಿ: ನಟಿ ಭಾವನಾ, ನಿಕೇತ್ ರಾಜ್ ಮೌರ್ಯ ಸೇರಿ 31 ಪದಾಧಿಕಾರಿಗಳಿಗೆ ಗೇಟ್‌ಪಾಸ್‌!

ನಾವು ಕಳವಳ ವ್ಯಕ್ತಪಡಿಸಿದೆವು, ಆದ್ರೆ ಸಿದ್ದರಾಮಯ್ಯ ಸೈಲೆಂಟ್ ಆಗಿದ್ದರು: ಸಚಿವ ಎಚ್.ಕೆ.ಪಾಟೀಲ್

SCROLL FOR NEXT