ದೇಶ

ಚುನಾವಣೆಗೆ ತೋರಿದಂತೆ, ಕೊರೋನಾ ವಿರುದ್ಧದ ಹೋರಾಟದಲ್ಲಿ ಗೆಲ್ಲಲು ಮೋದಿ ಏಕೆ ಉತ್ಸಾಹ ತೋರುತ್ತಿಲ್ಲ: ಕಪಿಲ್ ಸಿಬಲ್

Nagaraja AB

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಚುನಾವಣೆಯಲ್ಲಿ ಗೆದ್ದಂತೆ,  ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಗೆಲ್ಲಲು ಏಕೆ ಅದೇ ಉತ್ಸಾಹ ತೋರುತ್ತಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.

ದೇಶ ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆಯಿಂದ ತತ್ತರಿಸಿದ್ದರೂ, ಪ್ರಧಾನಿ ನರೇಂದ್ರ ಮೋದಿ ಕೇಂದ್ರದಲ್ಲಿ ತನ್ನ ಜವಾಬ್ದಾರಿಯನ್ನು ನಿರ್ಲಕ್ಷಿಸಿ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡು ಭಾಷಣ ಮಾಡುವುದನ್ನು ಕಾಂಗ್ರೆಸ್ ಪ್ರಶ್ನಿಸಿದೆ.

ಮೋದಿ ಅವರೇ, ಚುನಾವಣೆಯಲ್ಲಿ ಗೆಲಲ್ಲು ತೊಳ್ಬಲ, ಕಂಠಬಲ, ಸಂಪನ್ಮೂಲವನೆಲ್ಲಾ ಬಳಸುತ್ತೀರಿ,  ನಮ್ಮ ಜನರಿಗಾಗಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಗೆಲ್ಲಲು ಏಕೆ ಅದೇ ಉತ್ಸಾಹ ತೋರುತ್ತಿಲ್ಲ ಎಂದು ಸಿಬಿಲ್ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ, ಜನರು ಸಾಂಕ್ರಾಮಿಕದಿಂದ ಸಾಯುತ್ತಿದ್ದಾರೆ. ಜನರಿಗಾಗಿ ಮೋದಿ ಅವರ ಚುನಾವಣಾ ರ‍್ಯಾಲಿಗಳು ಚೆನ್ನಾಗಿ ನಡೆಯುತ್ತಿವೆ. ವಿಜಯ ದೈವಿಕ, ಆದರೆ ನೀವು ಹೋರಾಡುತ್ತಿರುವ ಯುದ್ಧಗಳು ನಿಜವಾಗಿಯೂ ನನ್ನದಲ್ಲ! ಎಂದಿದ್ದಾರೆ.

ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವಂತೆಯೇ, ಯಾವುದೇ ದೊಡ್ಡ ರ‍್ಯಾಲಿ, ಸಾರ್ವಜನಿಕ ಸಭೆಗಳನ್ನು ನಡೆಸುವುದಿಲ್ಲ ಎಂದು ಬಿಜೆಪಿ ಸೋಮವಾರ ಹೇಳಿಕೆ ನೀಡಿತ್ತು.

SCROLL FOR NEXT