ದೇಶ

ಲಾಕ್ ಡೌನ್ ನಿಂದಾಗಿ ಗರ್ಲ್ ಫ್ರೆಂಡ್ ನೋಡಲಾಗದ ಯುವಕನಿಗೆ 'ಲವ್ ಗುರು' ಆದ ಮುಂಬೈ ಪೊಲೀಸರು!

Nagaraja AB

ಮುಂಬೈ: ಲಾಕ್ ಡೌನ್ ನಿಂದ ತನ್ನ ಗರ್ಲ್ ಫ್ರೆಂಡ್ ನೋಡದೆ ಮಾನಸಿಕ ತೋಳಲಾಟಕ್ಕೆ ಸಿಲುಕಿದ್ದ ಪ್ರೇಮಿಯೊಬ್ಬನಿಗೆ ಮುಂಬೈ ಪೊಲೀಸರು ಲವ್ ಗುರುವಾಗಿ ಪರಿಣಮಿಸಿದ್ದಾರೆ. ಅದು ಹೇಗೆ ಅಂತೀರಾ?.

ಟ್ವಿಟರ್ ನಲ್ಲಿ ಪೊಲೀಸರನ್ನು ಸಂಪರ್ಕಿಸಿದ ಅಶ್ವಿನ್ ವಿನೋದ್, ಮಿಸ್ ಮಾಡಿಕೊಂಡಿರುವ ಗರ್ಲ್ಸ್ ಫ್ರೆಂಡ್ ಗಾಗಿ ಕಾರಿನ ಮೇಲೆ ಯಾವ ಸ್ಟೀಕರ್ ಬಳಸಬೇಕು ಎಂದು ಕೇಳಿದ್ದಾನೆ.  ಕರುಣೆಯಿಂದಲೇ ವಿನೋದ್ ಗೆ ಪ್ರತಿಕ್ರಿಯಿಸಿರುವ ಪೊಲೀಸರು 'ಇಟ್ ಜಸ್ಟ್ ಎ ಪೇಸ್ ಎಂದಿದ್ದಾರೆ.

'ಅದು ನಿನಗೆ ಅವಶ್ಯಕ ಎಂಬುದು ನಮಗೆ ಅರ್ಥವಾಗುತ್ತಿದೆ. ಆದರೆ, ಅದು ನಮ್ಮ ಅತ್ಯವಶ್ಯಕ ಅಥವಾ ತುರ್ತು ವಿಭಾಗದಲ್ಲಿ ಬರುವುದಿಲ್ಲ. ದೂರ ಇದಷ್ಟು ಪ್ರೀತಿ ಮತ್ತಷ್ಟು ಹೆಚ್ಚಾಗಿರುತ್ತದೆ. ನೀನು ಆರೋಗ್ಯವಾಗಿರುತ್ತೀಯಾ. ನೀವು ಜೀವನ ವಿಡಿ ಒಟ್ಟಾಗಿರಿ ಎಂದು ಹಾರೈಸುತ್ತೇವೆ. ಇದೊಂದು ಹಂತ ಎಂದು ಮುಂಬೈ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಪೊಲೀಸರ ಪ್ರತಿಕ್ರಿಯೆಗೆ ಮೈಕ್ರೋ ಬ್ಲಾಗಿಂಗ್ ಸೈಟ್ ಬಳಕೆದಾರರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಯೋಚನಾ ಬದ್ದ ಪ್ರತಿಕ್ರಿಯೆ . ನಿಮ್ಮ ಸೇವೆಗೆ ನಾವು ಎಂದೆಂದಿಗೂ ಕೃತಜ್ಞರಾಗಿರುತ್ತೇವೆ ಎಂದು ಸತ್ಯನ್ ಇರ್ಸಾನಿ ಎಂಬವರು ಪ್ರತಿಕ್ರಿಯಿಸಿದ್ದಾರೆ.  ಈ ಮಧ್ಯೆ ಬಳಕೆದಾರ ಸಂದೀಪ್ ಚೌಹಾನ್ ಎಂಬುವರು, ತನ್ನ ಸ್ನೇಹಿತರನ್ನು ಭೇಟಿ ಮಾಡಲು ಪೊಲೀಸರ ಅನುಮತಿ ಕೇಳಿದ್ದಾನೆ.

ಮುಂಬೈಯಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗಿದ್ದು, ಏಪ್ರಿಲ್ 30ರವರೆಗೂ ಕೋವಿಡ್-19 ಕರ್ಫ್ಯೂ ಜಾರಿಯಲ್ಲಿದೆ. ಅವಶ್ಯಕ ಕೆಲಸಗಾರರನ್ನು ಕರೆದೊಯ್ಯುವ ವಾಹನಗಳಿಗೆ ಮುಂಬೈ ಪೊಲೀಸರು ಕಲರ್ ಕೋಡೆಡ್ ಸ್ಟಿಕರ್ ಬಳಸಲು ಅವಕಾಶ ನೀಡಿದ್ದಾರೆ.

 ವೈದ್ಯರು, ವೈದ್ಯಕೀಯ ಸಿಬ್ಬಂದಿ, ಅಂಬ್ಯುಲೆನ್ಸ್, ಮತ್ತಿತರ ವಾಹನಗಳಿಗೆ ಸ್ಪೋರ್ಟ್ ರೆಡ್ ಸ್ಟೀಕರ್ ಮತ್ತು ಆಹಾರ, ತರಕಾರಿ, ಹಣ್ಣು, ಧಾನ್ಯ, ಡೈರಿ ಉತ್ಪನ್ನ ಮತ್ತಿತರ ವಸ್ತುಗಳನ್ನು ಸಾಗಾಟ ಮಾಡುವವರಿಗೆ ಹಸಿರು ಸ್ಟೀಕರ್ ಬಳಸಬಹುದಾಗಿದೆ.  ನಾಗರಿಕ ಅಧಿಕಾರಿಗಳು, ವಿದ್ಯುತ್ ಛಕ್ತಿ, ಟೆಲಿಫೋನ್ ಮತ್ತು ಪ್ರೇಸ್ ನವರು ತಮ್ಮ ವಾಹನಗಳಿಗೆ ಹಳದಿ ಸ್ಟೀಕರ್ ಬಳಸಬಹುದಾಗಿದೆ.

SCROLL FOR NEXT