ದೇಶ

ಭಾರತದಲ್ಲಿ ಕೋವಿಡ್-19 ನಿಂದ ಉಂಟಾಗುತ್ತಿರುವ ಕೊರತೆಯಿಂದ ಔಷಧ, ಆಕ್ಸಿಜನ್ ಗಾಗಿ ಕಾಳ ಸಂತೆ ಮೇಲೆ ಅವಲಂಬನೆ!

Srinivas Rao BV

ನವದೆಹಲಿ: ಭಾರತದಲ್ಲಿ ಕೋವಿಡ್-19 ನಿಂದ ಉಂಟಾಗುತ್ತಿರುವ ಕೊರತೆ, ಔಷಧ, ಆಕ್ಸಿಜನ್ ಗಳಿಗೆ ಕಾಳ ಸಂತೆ ಮೇಲೆ ಅವಲಂಬನೆ ಉಂಟಾಗಿದೆ.

ಆಸ್ಪತ್ರೆಗಳಲ್ಲಿ ಕೊರೋನಾ ವೈರಸ್ ಔಷಧ ಪೂರೈಕೆ ವ್ಯತ್ಯಯಗೊಂಡಿದೆ. ಒಂದೆಡೆ ಕಾಳ ಸಂತೆಯಲ್ಲಿ ಲಾಭದ ಮಾಪಕಗಳನ್ನು ಅಳೆಯಲಾಗುತ್ತಿದ್ದರೆ, ಮತ್ತೊಂದೆದೆ ಯುವ ಕಾರ್ಯಕರ್ತರು ಟ್ವಿಟರ್, ಇನ್ಸ್ಟಾಗ್ರಾಮ್ ಗಳ ಮೂಲಕ ಸಾಧ್ಯವಾದಷ್ಟು ಸಹಾಯ ಮಾಡಲು ಮುಂದಾಗುತ್ತಿದ್ದಾರೆ.

ಪಾಟ್ನಾದ ಈಶಾನ್ಯ ಭಾಗದಲ್ಲಿರುವ ಪ್ರಣಯ್ ಪಂಜ್ ತಮ್ಮ ಅನಾರೋಗ್ಯ ಪೀಡಿತ ತಾಯಿಗೆ, ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಗಳ ಪೂರೈಕೆ ಕಡಿಮೆಯಾಗಿದ್ದರಿಂದ ರೆಮ್ಡಿಸಿವಿರ್ ಔಷಧ ತರುವುದಕ್ಕಾಗಿ ಖಾಸಗಿ ಫಾರ್ಮಸಿಗಳಿಗೆ ಅಲೆದಿದ್ದರು. ಆದರೂ ಸಹ ಔಷಧ ಸಿಗುವುದು ಕಷ್ಟವಾಗಿದೆ. 

ಕೊನೆಗೆ ಕಾಳಸಂತೆಯಲ್ಲಿ (ಬ್ಲಾಕ್ ಮಾರ್ಕೆಟ್) ನಲ್ಲಿ ಔಷಧ ಸಿಗಬಹುದೆಂಬ ಮಾಹಿತಿಯನ್ನು ಫಾರ್ಮಸಿಯ ವ್ಯಕ್ತಿಯೊಬ್ಬರು ನೀಡಿದರು. ಈ ಮಾಹಿತಿಯನ್ನು ಪಡೆದು ಔಷಧ ತರಲು ಹೋದ ವ್ಯಕ್ತಿಗೆ ಬರೊಬ್ಬರಿ 100,000 ರೂಪಾಯಿಗಳನ್ನು ಕೊಟ್ಟು ಔಷಧ ಖರೀದಿಸುವಂತೆ ಹೇಳಿದರು. ಅಂದರೆ ಔಷಧ ಪಡೆಯಬೇಕಾದರೆ ಅದರ  ನೈಜ ಬೆಲೆಗಿಂತ 30 ಪಟ್ಟು ಹೆಚ್ಚು ಬೆಲೆತೆರಬೇಕಾಗಿ ಬಂದಿತ್ತು. ಆದರೆ ಆ ವೇಳೆಗೆ ಕೋವಿಡ್ ನಿಂದ ಪತ್ನಿಯನ್ನು ಕಳೆದುಕೊಂಡಿದ್ದ ಪಂಜ್ ಅವರ ಸೋದರ ಸಂಬಂಧಿಯಿಂದ ಔಷಧ ದೊರೆತಿದೆ. ಇದು ಕೇವಲ ಒಬ್ಬರು ಎದುರಿಸಿದ ಘಟನೆಯಲ್ಲ, ದೇಶದ ವಿವಿಧ ಭಾಗಗಳಲ್ಲಿ ಆಕ್ಸಿಜನ್ ಪೂರೈಕೆ ಹಾಗೂ ಔಷಧಗಳ ಪೂರೈಕೆಗೆ ಆಸ್ಪತ್ರೆಗಳಲ್ಲಿ ಕೊರತೆ ಉಂಟಾಗುತ್ತಿದ್ದು, ರೋಗಿಗಳ ಸಂಬಂಧಿಕರು ಕಾಳ ಸಂತೆಯ ಮೇಲೆ ಅವಲಂಬನೆಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

SCROLL FOR NEXT