ದೇಶ

ಕೋವಿಡ್ ಲಸಿಕೆ ಕೈಗೆಟುಕುವಂತೆ, ಜನೌಷಧಿ ಯೋಜನೆಯಲ್ಲಿ ಲಭ್ಯವಾಗುವಂತೆ ಮಾಡಿ: ಕೇಂದ್ರಕ್ಕೆ ಐಎಂಎ ಒತ್ತಾಯ

Lingaraj Badiger

ನವದೆಹಲಿ: ಕೋವಿಡ್-19 ಲಸಿಕೆ ಮುಕ್ತ ಮಾರುಕಟ್ಟೆಯಲ್ಲಿ ಜನರಿಗೆ ಕೈಗೆಟುಕುವ ದರದಲ್ಲಿ ಜನೌಷಧಿ ಯೋಜನೆಯ ಮೂಲಕ ನೀಡಬೇಕು ಎಂದು ಭಾರತೀಯ ವೈದ್ಯಕೀಯ ಸಂಘ(ಐಎಂಎ) ಶುಕ್ರವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಕೊರೋನಾ ಲಸಿಕೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಐಎಂಎ ಮನವಿ ಮಾಡಿದೆ.

ಸಾಂಕ್ರಾಮಿಕ ರೋಗ ನಿಯಂತ್ರಿಸಲು ಆದ ಆರ್ಥಿಕ ವೆಚ್ಚಕ್ಕಿಂತ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸಾಮೂಹಿಕವಾಗಿ  ಉಚಿತ ಲಸಿಕೆ ನೀಡುವ ವೆಚ್ಚವು ಕಡಿಮೆ ಇರುತ್ತದೆ ಎಂದು ಐಎಂಎ ಪ್ರಕಟಣೆಯಲ್ಲಿ ತಿಳಿಸಿದೆ.

ಕೊರೋನಾ ವೈರಸ್ ಸೋಂಕಿಗೆ ಲಸಿಕೆ ಹಾಕುವುದು ಸರ್ಕಾರದ ಆದ್ಯತೆಯಾಗಿರಬೇಕು, ಏಕೆಂದರೆ ವ್ಯಾಕ್ಸಿನೇಷನ್ ವೈಯಕ್ತಿಕ ಸುರಕ್ಷತೆಯನ್ನು ಮಾತ್ರವಲ್ಲದೆ ಇಡೀ ಸಮುದಾಯದ ಸುರಕ್ಷತೆಗೆ ದಾರಿ ಮಾಡಿಕೊಡುವ ಮೂಲಕ ಸಮಾಜದ ಸುರಕ್ಷತೆಯನ್ನೂ ಹೆಚ್ಚಿಸುತ್ತದೆ ಎಂದು ವೈದ್ಯರ ಸಂಘ ಹೇಳಿದೆ. ಅಲ್ಲದೆ ಲಸಿಕೆ ದರದಲ್ಲಿ ಪಾರದರ್ಶಕತೆ ಇರಬೇಕು ಎಂದು ಸಂಘ ಒತ್ತಾಯಿಸಿದೆ.

SCROLL FOR NEXT