ದೇಶ

18-45 ವಯಸ್ಸಿನವರಿಗೆ ಲಸಿಕೆ ನೀಡುವ ಮೊದಲು ಹೆಚ್ಚು ಖಾಸಗಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿ: ರಾಜ್ಯಗಳಿಗೆ ಕೇಂದ್ರ ಸೂಚನೆ

Srinivas Rao BV

ನವದೆಹಲಿ: ಮೇ 1 ರಿಂದ ಕೋವಿಡ್-19 ಲಸಿಕೆಯ ಹೊಸ ನಿಯಮಗಳು ಜಾರಿಗೆ ಬರಲಿದ್ದು, 18 ವರ್ಷದ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುತ್ತದೆ. ಇದಕ್ಕೂ ಮುನ್ನ ಖಾಸಗಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. 

ನಿಗದಿಪಡಿಸಿರುವ ವಯಸ್ಸಿನವರಿಗೆ ಆನ್ ಲೈನ್ ನೋಂದಣಿ ವ್ಯವಸ್ಥೆಯ ಮೂಲಕವೇ ಲಸಿಕೆಯನ್ನು ನೀಡಬೇಕು, ಪರಿಣಾಮಕಾರಿಯಾಗಿ ಜನಸಂದಣಿಯನ್ನು ನಿರ್ವಹಿಸುವುದಕ್ಕೆ ರಾಜ್ಯಗಳಿಗೆ ಕೇಂದ್ರ ಸೂಚನೆ ನೀಡಿದೆ. 

ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹಾಗೂ ಕೋವಿಡ್-19 ನಿಯಂತ್ರಣಕ್ಕಾಗಿ ಇರುವ ತಂತ್ರಜ್ಞಾನ ಮತ್ತು ದತ್ತಾಂಶ ನಿರ್ವಹಣೆಯ ಎಂಪವರ್ಡ್ ಗ್ರೂಪ್ ನ ಅಧ್ಯಕ್ಷ ಆರ್ ಎಸ್ ಶರ್ಮಾ ರಾಜ್ಯಗಳಿಗೆ ಮೂರನೇ ಹಂತದ ಲಸಿಕೆ ಕಾರ್ಯತಂತ್ರವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗಸೂಚಿಗಳನ್ನು ಏ.24 ರಂದು ಬಿಡುಗಡೆ ಮಾಡಿದೆ. 

ರಾಜ್ಯಗಳು ಖಾಸಗಿ ಆಸ್ಪತ್ರೆಗಳು, ಕೈಗಾರಿಕಾ ಸಂಸ್ಥೆಗಳ ಆಸ್ಪತ್ರೆಗಳ ಸಹಭಾಗಿತ್ವದ ಜೊತೆಗೆ ಹೆಚ್ಚುವರಿ ಖಾಸಗಿ ಕೋವಿಡ್-19 ಲಸಿಕಾ ಕೇಂದ್ರ (ಸಿವಿಸಿ)ಗಳನ್ನು ಸ್ಥಾಪಿಸಿಕೊಳ್ಳಬೇಕು ಎಂದು ಕೇಂದ್ರ ಹೇಳಿದೆ. ಖಾಸಗಿ ಆಸ್ಪತ್ರೆಗಳು ಖರೀದಿಸಿರುವ ಲಸಿಕೆಗಳು, ಕೋವಿನ್ ಪೋರ್ಟಲ್ ನಲ್ಲಿ ಆಸ್ಪತ್ರೆಗಳು ದಾಸ್ತಾನು ಹಾಗೂ ದರ, ಲಸಿಕೆ ಲಭ್ಯತೆ ಬಗ್ಗೆ ಮಾಹಿತಿ ನೀಡಬೇಕು ಎಂದು ಸಚಿವಾಲಯ ತಿಳಿಸಿದೆ. 

SCROLL FOR NEXT