ದೇಶ

14 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿದ ಮೊದಲ ರಾಷ್ಟ್ರ ಭಾರತ: ಕೇಂದ್ರ ಸರ್ಕಾರ

Srinivasamurthy VN

ನವದೆಹಲಿ: 14 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿದ ಮೊದಲ ರಾಷ್ಟ್ರ ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಲಸಿಕೆ ವಿತರಣೆ ಪ್ರಕ್ರಿಯೆ ಮತ್ತಷ್ಟು ವೇಗ ಪಡೆಯಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಕೇವಲ 99 ದಿನಗಳಲ್ಲಿ 14 ಕೋಟಿ ಡೋಸ್ ಕೋವಿಡ್ -19 ಲಸಿಕೆ ವಿತರಣೆ ಮಾಡುವ ಮೂಲಕ ಭಾರತ ಈ ಸಾಧನೆ ಮಾಡಿದೆ. ಏಪ್ರಿಲ್ 24 ರಂದು ರಾತ್ರಿ 8 ಗಂಟೆಯವರೆಗೆ ದೇಶವು 24 ಲಕ್ಷಕ್ಕೂ ಹೆಚ್ಚು ಲಸಿಕೆ ಪ್ರಮಾಣವನ್ನು ನೀಡಿದ್ದು, ಈ ಪೈಕಿ  15,69,631 ಫಲಾನುಭವಿಗಳಿಗೆ ಮೊದಲ ಡೋಸ್‌, 8,53,358 ಫಲಾನುಭವಿಗಳು ಲಸಿಕೆಯ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಆ ಮೂಲಕ ದೇಶದಲ್ಲಿನ ಒಟ್ಟಾರೆ ಲಸಿಕೆ ವಿತರಣಾ ಪ್ರಮಾಣ 14 ಕೋಟಿ ಡೋಸ್ ಗೆ ಏರಿಕೆಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಇಲಾಖೆ, 'ಇಂದು ರಾತ್ರಿ 8 ಗಂಟೆಯ ತಾತ್ಕಾಲಿಕ ವರದಿಯ ಪ್ರಕಾರ ದೇಶದಲ್ಲಿ ನೀಡಲಾಗುವ ಕೋವಿಡ್-19 ಲಸಿಕೆ ಪ್ರಮಾಣಗಳ ಒಟ್ಟು ಸಂಖ್ಯೆ 14,08,02,794 ಡೋಸ್ ಆಗಿದೆ. ಈ ಪೈಕಿ ಆರೋಗ್ಯ ಕಾರ್ಯಕರ್ತರಿಗೆ 92,89,621 ಡೋಸ್,  59,94,401 ಆರೋಗ್ಯ ಕಾರ್ಯಕರ್ತರಿಗೆ 2ನೇ ಡೋಸ್ ಲಸಿಕೆ ನೀಡಲಾಗಿದೆ. ಅಂತೆಯೇ ಫ್ರಂಟ್‌ಲೈನ್ ವರ್ಕರ್ಸ್ ಗೆ 1,19,42,233 ಮೊದಲ ಡೋಸ್, 62,77,797 ಎರಡನೇ ಡೋಸ್ ನೀಡಲಾಗಿದೆ. 45 ವರ್ಷದಿಂದ 60 ವರ್ಷ ವಯಸ್ಸಿನವರಿಗೆ 4,76,41,992 (ಮೊದಲ ಡೋಸ್), 45  ವರ್ಷದಿಂದ 60 ವರ್ಷ ವಯಸ್ಸಿನವರಿಗೆ 23,22,480 (ಎರಡನೇ ಡೋಸ್), 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ 4,96,32,245 (ಮೊದಲ ಡೋಸ್ ) ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ 77,02,025 (ಎರಡನೇ ಡೋಸ್) ಲಸಿಕೆ ನೀಡಲಾಗಿದೆ.

ಏತನ್ಮಧ್ಯೆ, ರಾಷ್ಟ್ರೀಯ ಕೋವಿಡ್ -19 ಮರಣ ಪ್ರಮಾಣ ಕಡಿಮೆಯಾಗಿದೆ ಮತ್ತು ಪ್ರಸ್ತುತ ಇದು ಶೇಕಡಾ 1.14 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
 

SCROLL FOR NEXT