ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯು ಆಮ್ಲಜನಕದ ಬಿಕ್ಕಟ್ಟಿನ ನಡುವೆ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು, ಸೋಮವಾರ ಮಹಾಮಾರಿಗೆ ಬರೋಬ್ಬರಿಗೆ 380 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ದೆಹಲಿಯಲ್ಲಿ ಪಾಸಿಟಿವ್ ಪ್ರಮಾಣ ಶೇಕಡಾ 35 ಕ್ಕಿಂತ ಹೆಚ್ಚಿದ್ದು, ಸತತ ಐದನೇ ದಿನ 300ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ, ಭಾನುವಾರ 350 ಸಾವು, ಹಾಗೂ ಸೋಮವಾರ 380 ಸಾವುಗಳು ವರದಿಯಾಗಿದ್ದು,
ಇದು ಒಂದು ವರ್ಷದ ಹಿಂದೆ ಸಾಂಕ್ರಾಮಿಕ ರೋಗ ಪ್ರಾರಂಭವಾದ ನಂತರ ವರದಿಯಾದ ಅತಿ ಹೆಚ್ಚು ಸಾವಿನ ಸಂಖ್ಯೆಯಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರ 22,933, ಶನಿವಾರ 24,103, ಶುಕ್ರವಾರ 24,331, ಗುರುವಾರ 26,169, ಮತ್ತು ಬುಧವಾರ 24,638 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.