ದೇಶ

ಪ್ರಸ್ತುತ ಕೋವಿಡ್ ಪರಿಸ್ಥಿತಿ ಬಗ್ಗೆ ಆತಂಕ ಬೇಡ; ಮನೆಯಲ್ಲೂ ಮಾಸ್ಕ್ ಧರಿಸುವುದು ಒಳ್ಳೆಯದು: ಕೇಂದ್ರ ಆರೋಗ್ಯ ಸಚಿವಾಲಯ

Nagaraja AB

ನವದೆಹಲಿ: ಪ್ರಸ್ತುತದಲ್ಲಿನ ಕೋವಿಡ್ ಪರಿಸ್ಥಿತಿ ಬಗ್ಗೆ ಜನರು ಆತಂಕಪಡಬೇಕಾಗಿಲ್ಲ, ಅಗತ್ಯವಿದ್ದಾಗ ಮಾತ್ರ ಆಸ್ಪತ್ರೆಗೆ ದಾಖಲಾಗಿ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿ ಲವ್ ಅಗರ್ವಾಲ್ ಹೇಳಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಮತ್ತು ಕೈಗಳನ್ನು ಸ್ಯಾನಿಟೈಸರ್ಸ್ ಗಳಿಂದ ಆಗಾಗ್ಗೆ ಶುದ್ದೀಕರಿಸುವುದು ಜೀವನದ ಭಾಗವಾಗಿರಲಿ ಎಂದು ಅವರು ಸಲಹೆ ನೀಡಿದ್ದಾರೆ.

ನೀತಿ ಆಯೋಗದ ಸದಸ್ಯ ವಿ. ಕೆ. ಪೌಲ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಆಕ್ಸಿಜನ್ ಲಭ್ಯವಿದ್ದು, ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಅನಿಲ ಟ್ಯಾಂಕ್ ಗಳನ್ನು ಸಾಗಿಸಲು ವಾಯುಪಡೆ, ರೈಲ್ವೆ ನೆರವು ನೀಡುತ್ತಿವೆ. ಕೈಗಾರಿಕೆಗಳಿಗೆ ಮೆಡಿಕಲ್ ಆಕ್ಸಿಜನ್ ನೀಡದಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಬಾಡಿಗೆ ಆಧಾರದ ಮೇಲೆ ಹೊರಗಡೆಯಿಂದ ಆಮ್ಲಜನಕ ಟ್ಯಾಂಕರ್ ಗಳನ್ನು ಪಡೆಯಲಾಗುತ್ತಿದೆ ಎಂದು  ತಿಳಿಸಿದರು.

ನೀತಿ ಆಯೋಗದ ಸದಸ್ಯ ವಿ. ಕೆ. ಪೌಲ್ ಮಾತನಾಡಿ, ಮನೆಯಲ್ಲಿ ಇರುವಾಗಲೂ ಮಾಸ್ಕ್ ಧರಿಸುವಂತೆ ಜನರಿಗೆ ಸಲಹೆ ನೀಡಿದರು.

ಈವರೆಗೂ 14.19 ಕೋಟಿ ಜನರಿಗೆ ಕೊರೋನಾವೈರಸ್ ಲಸಿಕೆ ಹಾಕಲಾಗಿದೆ. ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಆರೋಗ್ಯ ಸಚಿವಾಲಯವು ಸೋಮವಾರ ಎಲ್ಲಾ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ  ಕಂಟೈನ್‌ಮೆಂಟ್, ಕ್ಲಿನಿಕಲ್ ಮ್ಯಾನೇಜ್‌ಮೆಂಟ್ ಮತ್ತು ಕಮ್ಯುನಿಟಿ ಎಂಗೇಜ್‌ಮೆಂಟ್ ಅನ್ನು ಒಳಗೊಂಡಿರುವ 3-ತತ್ವಗಳ ಕಾರ್ಯತಂತ್ರವನ್ನು ವಿವರಿಸಿದೆ.

SCROLL FOR NEXT