ಕಡಿಮೆ ಪ್ರಯಾಣಿಕರು: ಏ.28 ರಿಂದ ಜೂ.1 ವರೆಗೆ ಈ 10 ರೈಲುಗಳು ರದ್ದು 
ದೇಶ

ಕಡಿಮೆ ಪ್ರಯಾಣಿಕರು: ಏಪ್ರಿಲ್ 28 ರಿಂದ ಜೂನ್ 1 ರವರೆಗೆ ಈ 10 ರೈಲುಗಳು ರದ್ದು

ಪ್ರಯಾಣಿಕರು ಕಡಿಮೆ ಪ್ರಮಾಣದಲ್ಲಿ ಸಂಚರಿಸುತ್ತಿರುವ ಪರಿಣಾಮ, ದಕ್ಷಿಣ ಕೇಂದ್ರೀಯ ರೈಲ್ವೆಯ (ಎಸ್ ಸಿಆರ್) ಏ.28 ರಿಂದ ಜೂ.1 ರವರೆಗೆ 10 ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. 

ಸಿಕಂದರಾಬಾದ್: ಪ್ರಯಾಣಿಕರು ಕಡಿಮೆ ಪ್ರಮಾಣದಲ್ಲಿ ಸಂಚರಿಸುತ್ತಿರುವ ಪರಿಣಾಮ, ದಕ್ಷಿಣ ಕೇಂದ್ರೀಯ ರೈಲ್ವೆಯ (ಎಸ್ ಸಿಆರ್) ಏ.28 ರಿಂದ ಜೂ.1 ರವರೆಗೆ 10 ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. 

ಕೋವಿಡ್-19 ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಕಡಿಮೆ ಪ್ರಮಾಣದಲ್ಲಿ ಸಂಚರಿಸುತ್ತಿದ್ದಾರೆ, ಮತ್ತೆ ಕೆಲವು ರಾಜ್ಯಗಳಲ್ಲಿ ಲಾಕ್ ಡೌನ್ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. 

ಎಸ್ ಸಿಆರ್ ಈ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಸಂಚರಿಸುವ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಹೇಳಿದೆ. 

ವಿವರಗಳು ಹೀಗಿವೆ

ನರ್ಸಾಪುರ್- ನಿಡದವೊಲು (07241)
ನಿಡದವೊಲು-ನರಸಪುರ್ (07242)
ಸಿಕಂದರಾಬಾದ್-ಬೀದರ್ (07010)
ಬೀದರ್-ಹೈದರಾಬಾದ್ (07009)
ಸಿಕಂದರಾಬಾದ್-ಕರ್ನೂಲು ಸಿಟಿ(07027)
ಕರ್ನೂನು ನಗರ-ಸಿಕಂದರಾಬಾದ್ (07028)
ಮೈಸೂರು-ರೇನಿಗುಂಟ(01065)
ರೇನಿಗುಂಟ-ಮೈಸೂರು(01066)
ಸಿಕಂದರಾಬಾದ್-ಮುಂಬೈ ಎಲ್ ಟಿಟಿ(02235)
ಮುಂಬೈ ಎಲ್ ಟಿಟಿ-ಸಿಕಂದರಾಬಾದ್ (02236)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

SCROLL FOR NEXT