ದೇಶ

ಭಾರತದಲ್ಲಿ ರೆಮ್‌ಡೆಸಿವಿರ್ ಲಭ್ಯತೆ ವಿಸ್ತರಿಸಲು ಗಿಲ್ಯಾಡ್ ಮುಂದು, ಸರ್ಕಾರಕ್ಕೆ 4.5 ಲಕ್ಷ ಬಾಟಲಿ ನೀಡಿದ ಔಷಧ ಸಂಸ್ಧೆ

Vishwanath S

ನವದೆಹಲಿ: ಭಾರತದಲ್ಲಿ ಆಂಟಿವೈರಲ್ ಡ್ರಗ್ ರೆಮ್‌ಡೆಸಿವಿರ್ ಲಭ್ಯತೆಯನ್ನು ವಿಸ್ತರಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ದೇಶದಲ್ಲಿ ಕೊರೋನಾ ಉಲ್ಬಣದಿಂದಾಗಿ ಕನಿಷ್ಠ 4.5 ಲಕ್ಷ ಬಾಟಲುಗಳ 'ವೆಕ್ಲೂರಿ' ಯನ್ನು ಭಾರತ ಸರ್ಕಾರಕ್ಕೆ ನೀಡಲಿದೆ ಎಂದು ಔಷಧ ಸಂಸ್ಥೆ ಗಿಲ್ಯಾಡ್ ಸೈನ್ಸಸ್ ಹೇಳಿದೆ. 

ಭಾರತದಲ್ಲಿ ಪ್ರಕರಣಗಳ ತ್ವರಿತ ಹೆಚ್ಚಳಕ್ಕೆ ಪ್ರತಿಕ್ರಿಯಿಸಿರುವ ಕಂಪನಿಯು ತನ್ನ ಸ್ವಯಂಪ್ರೇರಿತ ಪರವಾನಗಿ ಪಾಲುದಾರರಿಗೆ ತಾಂತ್ರಿಕ ನೆರವು, ಹೊಸ ಸ್ಥಳೀಯ ಉತ್ಪಾದನಾ ಸೌಲಭ್ಯ, ತ್ವರಿತವಾಗಿ ಉತ್ಪಾದನೆಯನ್ನು ಹೆಚ್ಚಿಸಲು ಕಚ್ಚಾವಸ್ತುಗಳನ್ನು ಒದಗಿಸುತ್ತದೆ ಎಂದು ಗಿಲ್ಯಾಡ್ ಸೈನ್ಸಸ್ ಇಂಕ್ ಹೇಳಿಕೆಯಲ್ಲಿ ತಿಳಿಸಿದೆ.

ಸ್ಥಳೀಯ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ತನ್ನ ಪರವಾನಗಿದಾರರಿಗೆ ಬೆಂಬಲ ನೀಡುವುದರ ಜೊತೆಗೆ, ಭಾರತೀಯ ರೋಗಿಗಳ ತಕ್ಷಣದ ಅಗತ್ಯತೆಗಳನ್ನು ಪರಿಹರಿಸಲು ಸಹಾಯ ಮಾಡಲು ಗಿಲ್ಯಾಡ್ ಕನಿಷ್ಠ 4,50,000 ಬಾಟಲುಗಳನ್ನು ವೆಕ್ಲೂರಿ (ರಿಮೆಡೆಸಿವಿರ್) ದಾನ ಮಾಡುತ್ತದೆ ಎಂದು ಅದು ಹೇಳಿದೆ.

ಕೋವಿಡ್ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ತುರ್ತು ಚಿಕಿತ್ಸೆಗಾಗಿ ರೆಮ್‌ಡೆಸಿವಿರ್ ಅನ್ನು ಭಾರತ ಸರ್ಕಾರ ಅನುಮೋದಿಸಲಾಗಿದೆ.

ಭಾರತದಲ್ಲಿ ಇತ್ತೀಚೆಗೆ ಕೋವಿಡ್ 19 ಪ್ರಕರಣಗಳ ಉಲ್ಬಣವು ಸಮುದಾಯಗಳ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರುತ್ತಿದೆ. ಆರೋಗ್ಯ ವ್ಯವಸ್ಥೆಗಳ ಮೇಲೆ ಅಭೂತಪೂರ್ವ ಒತ್ತಡವನ್ನು ಸೃಷ್ಟಿಸಿದೆ ಎಂದು ಗಿಲ್ಯಾಡ್ ಸೈನ್ಸಸ್ ನ ಮುಖ್ಯ ವಾಣಿಜ್ಯ ಅಧಿಕಾರಿ ಜೋಹಾನ್ನಾ ಮರ್ಸಿಯರ್ ಹೇಳಿದ್ದಾರೆ.

SCROLL FOR NEXT