ಕೇಂದ್ರ ಸಚಿವ ಡಾ. ಹರ್ಷವರ್ಧನ್ 
ದೇಶ

ಕೋವಿಡ್ -19: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಭಾರತ ಉತ್ತಮ ಸಿದ್ದತೆ- ಹರ್ಷವರ್ಧನ್ 

ಕೋವಿಡ್-19 ಸಾಂಕ್ರಾಮಿಕ ನಿಭಾಯಿಸಲು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಭಾರತ ಹೆಚ್ಚಿನ ಅನುಭವದೊಂದಿಗೆ ಮಾನಸಿಕ ಹಾಗೂ ದೈಹಿಕವಾಗಿ ಉತ್ತಮ ರೀತಿಯಲ್ಲಿ ಸಿದ್ಧಗೊಂಡಿದ್ದಾಗಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಮಂಗಳವಾರ ಹೇಳಿದ್ದಾರೆ.

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ನಿಭಾಯಿಸಲು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಭಾರತ ಹೆಚ್ಚಿನ ಅನುಭವದೊಂದಿಗೆ ಮಾನಸಿಕ ಹಾಗೂ ದೈಹಿಕವಾಗಿ ಉತ್ತಮ ರೀತಿಯಲ್ಲಿ ಸಿದ್ಧಗೊಂಡಿರುವುದಾಗಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಮಂಗಳವಾರ ಹೇಳಿದ್ದಾರೆ.

ಚಂಡೀಘಡ, ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶದ 13 ಕಡೆಗಳಲ್ಲಿ ಆಯೋಜಿಸಿದ್ದ ರಕ್ತ ದಾನ ಶಿಬಿರವನ್ನು ವೆಬಿನರ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಜನರು ವರ್ಷಕ್ಕೆ  ಒಂದು ಬಾರಿ ತಮ್ಮ ಜನ್ಮ ದಿನದಂದು  ರಕ್ತ ದಾನ ಮಾಡಬೇಕು, ಇದರಿಂದ ಮಾನವೀಯತೆಗೆ ದೊಡ್ಡ ನೆರವಾಗಲಿದೆ ಎಂದು ಪ್ರೋತ್ಸಾಹಿಸಿದರು.

ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ವಿಶ್ವದ ಅತ್ಯಂತ ದೊಡ್ಡ ಲಸಿಕಾ ಅಭಿಯಾನದಲ್ಲಿ ಮೇ 1 ರಿಂದ 18 ವರ್ಷಕ್ಕೂ ಮೇಲ್ಪಟ್ಟ ಯುವಕರಿಗೂ ಲಸಿಕೆ ನೀಡಲಾಗುತ್ತಿದೆ.ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ರೀತಿಯಲ್ಲಿ ಸಾಂಕ್ರಾಮಿಕ ವಿರುದ್ಧ ಹೋರಾಟಕ್ಕೆ ಸಿದ್ಧಗೊಂಡಿದ್ದಾಗಿ ತಿಳಿಸಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾಳೆಯಿಂದಲೇ ರಾಷ್ಟ್ರವ್ಯಾಪಿ SIR: ಮೊದಲ ಹಂತದಲ್ಲಿ ಕೇರಳ, ತಮಿಳುನಾಡು, ಬಂಗಾಳ ಸೇರಿ 12 ರಾಜ್ಯಗಳಲ್ಲಿ ಮತದಾರರ ಪಟ್ಟಿಯ ಶುದ್ಧೀಕರಣ

ಕೇಜ್ರಿವಾಲ್ ಗೆ ಬೇಲ್, SIR, ಆರ್ಟಿಕಲ್ 370, ವಾಕ್ ಸ್ವಾತಂತ್ರ್ಯದ ಬಗ್ಗೆ ತೀರ್ಪು..: ನೂತನ ಸಿಜೆಐ ಟ್ರ್ಯಾಕ್ ರೆಕಾರ್ಡ್ ಹೀಗಿದೆ...

ಹುಬ್ಬಳ್ಳಿಯ ಉದ್ಯಮಿ, ಗುತ್ತಿಗೆದಾರ ಆನಂದ ಹೂವಿನಹಡಗಲಿ ಲಾಡ್ಜ್‌ನಲ್ಲಿ ಆತ್ಮಹತ್ಯೆ!

ಚಿತ್ರಮಂದಿರಗಳಲ್ಲಿ ಯಶಸ್ವಿ ಓಟದ ಮಧ್ಯೆ OTT ಗೆ ಬಂದೆ ಬಿಡ್ತು ಕಾಂತಾರ ಅಧ್ಯಾಯ 1; 1000 ಕೋಟಿ ಕಲೆಕ್ಷನ್‌ ಮೇಲೆ ಕಾರ್ಮೋಡ!

Thar ವಾಹನ ಗುದ್ದಿಸಿ ರೈತನ ಕೊಂದ BJP ಮುಖಂಡ; ಹೆಣ್ಣುಮಕ್ಕಳ ಬಟ್ಟೆ ಹರಿದು ನೀಚ ಕೃತ್ಯ; 14 ಮಂದಿ ವಿರುದ್ಧ FIR!

SCROLL FOR NEXT